Monday, March 2, 2026
Homeಟಾಪ್ ನ್ಯೂಸ್ಇಲಿಗಳ ಸಮಸ್ಯೆ ಬಗೆಹರಿಸಲು ನ್ಯೂಯಾರ್ಕ್ ವರ್ಷಕ್ಕೆ 1.2 ಕೋಟಿ ರೂ ವೆಚ್ಚ!

ಇಲಿಗಳ ಸಮಸ್ಯೆ ಬಗೆಹರಿಸಲು ನ್ಯೂಯಾರ್ಕ್ ವರ್ಷಕ್ಕೆ 1.2 ಕೋಟಿ ರೂ ವೆಚ್ಚ!

ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಅವರು ಕ್ಯಾಥ್ಲೀನ್ ಕೊರಾಡಿ ಅವರನ್ನು ಮೊದಲ ನಗರಾದ್ಯಂತ ನಿರ್ದೇಶಕರಾಗಿ ನೇಮಕ ಮಾಡಿಕೊಳ್ಳಲಾಗಿದೆ. ಹಾಗೆ ಇದನ್ನು ‘ರ್ಯಾಟ್ ಝಾರ್’ ಎಂದೂ ಕೂಡ ಕರೆಯುತ್ತಾರೆ. ಕೊರಾಡಿಗೆ ವರ್ಷಕ್ಕೆ $155,000 (₹1.2 ಕೋಟಿಗೂ ಹೆಚ್ಚು) ಪಾವತಿಸಲಾಗುತ್ತದೆ. “ನಾನು ಭಾವಿಸುತ್ತೇನೆ, ಇಲಿಗಳ ವಿರುದ್ಧ ಹೋರಾಡುವುದು, ಅದು ಸಾಕಾಗುವುದಿಲ್ಲ” ಎಂದು ಆಡಮ್ಸ್ ಪತ್ರಿಕಾಗೋಷ್ಠಿಯಲ್ಲಿ ನೇಮಕಾತಿಯನ್ನು ಘೋಷಿಸುವಾಗ ಹೇಳಿದರು.

ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಅವರು ಇಂದು ಕ್ಯಾಥ್ಲೀನ್ ಕೊರಾಡಿಯನ್ನು ನಗರದ ಮೊಟ್ಟಮೊದಲ ನಗರವ್ಯಾಪಿ ದಂಶಕಗಳ ಉಪಶಮನದ ನಿರ್ದೇಶಕಿಯಾಗಿ ನೇಮಕ ಮಾಡಲಾಗಿದೆ. ಇದನ್ನು ‘ರಾಟ್ ಝಾರ್’ ಎಂದೂ ಕರೆಯುತ್ತಾರೆ. ಕೊರಾಡಿಯು ನ್ಯೂಯಾರ್ಕ್ ನಗರದಲ್ಲಿ ಇಲಿಗಳಿಂದ ಆಗುವ ಸಮಸ್ಯೆಯನ್ನ ಕಡಿಮೆ ಮಾಡಲು ನ್ಯೂಯಾರ್ಕ್ ಸರ್ಕಾರಿ ಸಂಸ್ಥೆಗಳು, ಸಮುದಾಯ ಸಂಸ್ಥೆಗಳು ಮತ್ತು ಖಾಸಗಿ ವಲಯದಾದ್ಯಂತ ಸಮನ್ವಯಗೊಳಿಸಲಾಗುತ್ತಿದೆ. ಇದರಿಂದ ನಗರವನ್ನ ಸ್ವಚ್ಛವಾಗಿ ಇಡಲಾಗುವುದು. ಹಾಗೆ ಗುಣಮಟ್ಟದ ಜೀವನ ಮತ್ತು ಆರೋಗ್ಯ ಸಮಸ್ಯೆಯನ್ನು ನಿಭಾಯಿಸುತ್ತದೆ. ಮೇಯರ್ ಆಡಮ್ಸ್ ಪತ್ರಿಕಾ ಸುದ್ಧಿಗೋಷ್ಠಿಯನ್ನ ನಡೆಸಿ ಮಾತನಾಡಿದ್ದು, 2023 ಹಣಕಾಸು ವರ್ಷದಿಂದ ಹಾರ್ಲೆಮ್‌ನಾದ್ಯಂತ ಇಲಿ ಸಂತತಿಯನ್ನ ಕಡಿಮೆ ಮಾಡುವ ಕೆಲಸವನ್ನು ವಿಸ್ತರಿಸಲು ಮತ್ತು ವೇಗಗೊಳಿಸಲು ಹೊಸ ಹಾರ್ಲೆಮ್ ರ್ಯಾಟ್ ಮಿಟಿಗೇಶನ್ ಝೋನ್ ಮತ್ತು $3.5 ಮಿಲಿಯನ್ ಹೂಡಿಕೆಯನ್ನ ಮಾಡಲಾಗುವುದು ಎಂದು ಘೋಷಿಸಿದರು.

ಹಾಗೆ ನ್ಯೂಯಾರ್ಕ್ ನಗರವು ಇತ್ತೀಚಿಗೆ ಸಾರ್ವಜನಿಕರ ಶತ್ರು ಆಗಿರುವ ಇಲಿಗಳ ವಿರುದ್ಧ ಹೋರಾಡಲು ತುಂಬಾ ಕೆಲಸಗಳನ್ನ ಮಾಡಿದೆ. ಆದರೆ ನಮ್ಮ ನಗರದ 5 ಸ್ಥಳಗಳಲ್ಲಿ ಇಲಿಗಳ ಸಂತತಿಯನ್ನ ಕಡಿಮೆ ಮಾಡಲು ಯಾರಾದರು ಒಬ್ಬ ವ್ಯಕ್ತಿಯ ಅಗತ್ಯವಿದೆ ಎಂದು ತಿಳಿಯಿತು. ಹಾಗಾಗಿ ನಾನು ಈ ಇಲಿಗಳ ಸಂತತಿಯನ್ನ ಕೊನೆಗೊಳಿಸಲು ಕ್ಯಾಥಿಯನ್ನು ಆಯ್ಕೆ ಮಾಡಿರುವುದು ಖುಷಿ ತಂದಿದೆ. ಅಲ್ಲದೇ ಕ್ಯಾಥಿಗೆ ನ್ಯೂಯಾರ್ಕ್ ನಿವಾಸಿಗಳಿಗೆ ಇಲಿಯ ಕಾಟದಿಂದ ಮುಕ್ತಿಗೊಳಿಸಿ ನಗರವನ್ನ ಸ್ವಚ್ಛವಾಗಿ ನೋಡಿಕೊಳ್ಳುವ ಎಲ್ಲಾ ಜ್ಞಾನ, ಅನುಭವ ಮತ್ತು ಶಕ್ತಿ ಎಲ್ಲವೂ ಇದೆ ಎಂದು ಮೇಯರ್ ಆಡಮ್ಸ್ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ