ಬೆಂಗಳೂರು: ರಾಮನಗರದಿಂದ ಉಮೇದುವಾರಿಕೆಗೆ ಜೆಡಿಎಸ್ ವರಿಷ್ಠ ದೇವೇಗೌಡರಿಂದ ಬಿ-ಫಾರ್ಮ್ ಪಡೆಯುವ ವೇಳೆ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರಿಟ್ಟ ಘಟನೆ ಸೋಮವಾರ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ನಡೆಯಿತು. ತನ್ನ ತಾಯಿ ಅನಿತಾ ಕುಮಾರಸ್ವಾಮಿ ಹಾಗೂ ಪತ್ನಿ, ಪುತ್ರನೊಡನೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿಗೆ ದೇವೇಗೌಡರು ಬಿಫಾರ್ಮ್ ನೀಡಿದರು.
ದೇವೇಗೌಡರ ಆರೋಗ್ಯ ಸ್ಥಿತಿ ಕಂಡು ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದರು. ಬಿ-ಫಾರ್ಮ್ ಪಡೆದ ಬಳಿಕ ದೇವೇಗೌಡ ಚೆನ್ನಮ್ಮ ದಂಪತಿಗೆ ನಮಸ್ಕರಿಸಿ ಆಶೀರ್ವಾದವನ್ನೂ ಪಡೆದರು.
ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಮಗನಿಗಾಗಿ ತನ್ನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಈಗಾಗಲೇ ಕ್ಷೇತ್ರಾದ್ಯಂತ ಪ್ರಚಾರವನ್ನೂ ನಡೆಸುತ್ತಿರುವ ನಿಖಿಲ್ ಚುನಾವಣೆ ಎದುರಿಸಲು ಸಿದ್ದತೆಯಲ್ಲಿ ತೊಡಗಿದ್ದಾರೆ.