Thursday, October 9, 2025
Homeಚುನಾವಣೆ 2023ಬಂಡಾಯದಿಂದ ಪಕ್ಷಕ್ಕೆ ಡ್ಯಾಮೇಜ್‌ ಇಲ್ಲ: ಸಿಎಂ ಬೊಮ್ಮಾಯಿ

ಬಂಡಾಯದಿಂದ ಪಕ್ಷಕ್ಕೆ ಡ್ಯಾಮೇಜ್‌ ಇಲ್ಲ: ಸಿಎಂ ಬೊಮ್ಮಾಯಿ

ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗಿದೆ, ಇನ್ನೂ 12 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಉಳಿದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜಕಾರಣದಲ್ಲಿ ಪಕ್ಷ ಬದಲಿಸೋದು ಸಾಮಾನ್ಯ, ಆಗ್ತಾ ಇರುತ್ತೆ. ಬಂಡಾಯ ಸರಿ ಪಡಿಸ್ತಾ ಇದೀವಿ, ಕಾರ್ಯಕರ್ತರು ಮತ್ತು ಪಕ್ಷ ಗಟ್ಟಿ ಇರೋದ್ರಿಂದ ಡ್ಯಾಮೇಜ್ ಆಗಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಲವು ಕಡೆ ಅಪೇಕ್ಷಿತರು, ಆಕಾಂಕ್ಷಿಗಳು, ಎಂಎಲ್ ಸಿಗಳು ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಬಹುತೇಕ ಕಡೆ ಭಿನ್ನಮತ ಶಮನ ಆಗುತ್ತೆ, ಹಿರಿಯರು ಮಾತನಾಡ್ತಾ ಇದಾರೆ. ಹಿರಿಯರ ಜೊತೆಗೂ ನಾನು ಮತ್ತು ಹೈಕಮಾಂಡ್ ಮಾತನಾಡ್ತಾ ಇದೆ, ಬಗೆ ಹರಿಯೋ ವಿಶ್ವಾಸ ಇದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಸವದಿ ಹಿರಿಯರಿದ್ದಾರೆ, ಅವರಿಗೆ ಭಾವನೆ ಇದೆ, ಸುಧೀರ್ಘ ರಾಜಕೀಯ ಜೀವನದಲ್ಲಿ ಇದ್ದಾರೆ. ಅವರ ಕ್ಷೇತ್ರದ ಜನರ ವಿಶ್ವಾಸ ಅವರು ಉಳಿಸಿಕೊಳ್ಳಬೇಕು. ಆ ಕಡೆಯಿಂದಲೂ ಅವರಿಗೆ ಒತ್ತಡ ಇದೆ, ಸಮಯ ಬೇಕು. ಆದಷ್ಟು ಬೇಗ ಅವರ ಸಮಸ್ಯೆ ಬಗೆ ಹರಿಯೋ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ನವರಿಗೆ 60-65 ಕ್ಷೇತ್ರಗಳಿಗೆ ಟಿಕೆಟ್ ಇರಲಿಲ್ಲ, ಅದಕ್ಕೆ 160 ಮಾಡಿ ನಿಲ್ಲಿಸಿದ್ದಾರೆ. ಅವರದ್ದು ಆರಂಭ ಶೂರತ್ವ, ಈಗ ಆಮದು ಮಾಡಿಕೊಳ್ಳೋ ಲೆಕ್ಕಾಚಾರದಲ್ಲಿ ಇದ್ದಾರೆ.‌ ಅವರ ಬಳೊ ಸಮರ್ಥ ಅಭ್ಯರ್ಥಿ ಇಲ್ಲ, ಅವರು ಅಧಿಕಾರಕ್ಕೆ ಬರಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.

ಹೆಚ್ಚಿನ ಸುದ್ದಿ