Monday, March 2, 2026
Homeಟಾಪ್ ನ್ಯೂಸ್ಬ್ಲೂಫಿಲಂನಲ್ಲಿ ನಟಿಸ್ತೀರ? ಪೆಂಟಗಾನ್‌ ನಟಿಗೆ ಎದುರಾಯ್ತು ಅಸಭ್ಯ ಪ್ರಶ್ನೆ

ಬ್ಲೂಫಿಲಂನಲ್ಲಿ ನಟಿಸ್ತೀರ? ಪೆಂಟಗಾನ್‌ ನಟಿಗೆ ಎದುರಾಯ್ತು ಅಸಭ್ಯ ಪ್ರಶ್ನೆ

ಪೆಂಟಗನ್‌ ಚಿತ್ರದ ನಟಿ ತನಿಷಾ ಕುಪ್ಪಂಡ ಅವರ ಬಳಿ ಯೂಟ್ಯೂಬರ್‌ ಒಬ್ಬ ಅನಗತ್ಯ ಪ್ರಶ್ನೆಗಳನ್ನು ಕೇಳಿ ವಿವಾದ ಸೃಷ್ಟಿಸಿಕೊಂಡಿದ್ದಾನೆ. ‘ಪೆಂಟಗನ್’ ಚಿತ್ರದಲ್ಲಿ ನಟಿ ತನಿಷಾ ಬೋಲ್ಡ್ ಆಗಿ ನಟಿಸಿದ್ದು, ಚಿತ್ರರಸಿಕರ ಗಮನ ಸೆಳೆದಿದ್ದಾರೆ.

ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದಾಗ, ನಿರೂಪಕ ನಟಿ ಬಳಿ ʼಬ್ಲೂಫಿಲಂʼ ನಲ್ಲಿ ನಟಿಸುತ್ತೀರಾ ಎಂದು ಪ್ರಶ್ನಿಸಿದ್ದಾನೆ. ಈ ಪ್ರಶ್ನೆಯಿಂದ ಇರಿಸುಮುರಿಸುಗೊಂಡ ನಟಿ ನಿರೂಪಕನಿಗೆ ಅಲ್ಲಿಯೇ ತಪರಾಕಿ ನೀಡಿದ್ದಾರೆ.

ಕನ್ನಡ ಚಿತ್ರರಂಗದ ಯಾರು ಬ್ಲೂ ಫಿಲಂ ನಟಿಸಿದ್ದಾರೆ, ಬೋಲ್ಡ್ ಆಗಿ ಕಾಣಿಸಿಕೊಂಡ ಮಾತ್ರಕ್ಕೆ ಬ್ಲೂ ಫಿಲಂ ಮಾಡೋಕೆ ಆಗುತ್ತಾ? ನಾವು ಪೋರ್ನ್ ಸ್ಟಾರ್ ಅಲ್ಲ ಎಂದು ನಟಿ ಅಲ್ಲಿಯೇ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ನಂತರ ನಟಿ ಜೊತೆಗಿದ್ದವರು, ಚಿತ್ರತಂಡದವರು ಕೂಡಾ ಯೂಟ್ಯೂಬರ್‌ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ.

  
 

ಹೆಚ್ಚಿನ ಸುದ್ದಿ