ನವದೆಹಲಿ: ಪುಲ್ವಾಮಾ ದಾಳಿ ಘಟನೆಗೆ ಕೇಂದ್ರ ಸರಕಾರದ ಲೋಪಗಳೇ ಕಾರಣ ಎಂಬ ಜಮ್ಮು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯಿಸಿದೆ.
ಪ್ರಕಟಣೆ ಹೊರಡಿಸಿರುವ ಪಾಕಿಸ್ತಾನ ಪುಲ್ವಾಮಾ ದಾಳಿಗೆ ಸಂಬಂಧಿಸಿ ತನ್ನ ನಿಲುವನ್ನು ಸತ್ಯಪಾಲ್ ಮಲಿಕ್ ಹೇಳಿಕೆ ಸಮರ್ಥಿಸಿದೆ ಎಂದಿದೆ.
ಇಸ್ಲಾಮಾಬಾದ್ ವಿರುದ್ಧದ ಪ್ರಚಾರಕ್ಕಾಗಿ ದೆಹಲಿಯು “ಸುಳ್ಳು ಮತ್ತು ವಂಚನೆ” ಯನ್ನು ಬಳಸಿಕೊಂಡಿದೆ ಎಂದಿರುವ ಪಾಕಿಸ್ತಾನ, ಪಾಕಿಸ್ತಾನದಿಂದ ಆರ್‌ಡಿಎಕ್ಸ್ ಸ್ಫೋಟಕಗಳನ್ನು ಪಡೆಯಲಾಗಿದೆ ಎಂಬ ಸತ್ಯಪಾಲ್ ಮಲಿಕ್ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿಲ್ಲ.
ಸತ್ಯಪಾಲ್ ಮಲಿಕ್ ಅವರ ಆರೋಪಗಳು, ಮೋದಿ ಸರ್ಕಾರವು “ಹಿಂದುತ್ವದ ಅಜೆಂಡಾವನ್ನು ಮುಂದಿಡಲು” ಘಟನೆಯನ್ನು ಬಳಸಿಕೊಂಡಿದೆ ಎಂಬ ಅಂಶವನ್ನು ಸಾಬೀತುಪಡಿಸಿದೆ ಎಂದು ಪಾಕಿಸ್ತಾನ ಹೇಳಿದೆ.