Saturday, June 27, 2026
Homeಚುನಾವಣೆ 2023ಮೋದಿ ದೇವರಲ್ಲ, ಜನರ ಪ್ರತಿನಿಧಿ: ಜೆಪಿ ನಡ್ಡಾ ಹೇಳಿಕೆಗೆ ಸಿದ್ದು ಗರಂ

ಮೋದಿ ದೇವರಲ್ಲ, ಜನರ ಪ್ರತಿನಿಧಿ: ಜೆಪಿ ನಡ್ಡಾ ಹೇಳಿಕೆಗೆ ಸಿದ್ದು ಗರಂ

ಬೆಂಗಳೂರು: ಕರ್ನಾಟಕದ ಜನತೆ ನರೇಂದ್ರ ಮೋದಿ ಅವರ ಆಶಿರ್ವಾದದಿಂದ ವಂಚಿತರಾಗಬಾರದು ಎಂಬ ಜೆಪಿ ನಡ್ಡಾ ಹೇಳಿಕೆಗೆ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

“ಪ್ರಜಾಪ್ರಭುತ್ವದಲ್ಲಿ‌ ಜನರೇ ಜನಾರ್ಧನರು, ಆಶೀರ್ವಾದ ನೀಡಲು ನರೇಂದ್ರ ಮೋದಿ‌ ದೇವರಲ್ಲ” ಎಂದು ಸಿದ್ದರಾಮಯ್ಯ ಹೇಳಿದ್ದು, ಪ್ರಧಾನಿ ಮೋದಿ ಜನರ ಸೇವೆ ಮಾಡಲು ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿ ಎನ್ನುವುದು ನೆನಪಿರಲಿ ಎಂದು ಜೆಪಿ ನಡ್ಡಾರಿಗೆ ತಿರುಗೇಟು ನೀಡಿದ್ದಾರೆ.

“ಕರ್ನಾಟಕದ ಜನತೆ ನರೇಂದ್ರ ಮೋದಿಯವರ ಆಶೀರ್ವಾದದಿಂದ ವಂಚಿತರಾಗಬಾರದು ಎನ್ನುವ ನಿಮ್ಮ ಹೇಳಿಕೆ ಬೆದರಿಕೆ ಎಂದಾದರೆ ಅದಕ್ಕೆ ನನ್ನ ಧಿಕ್ಕಾರ ಇದೆ. ಇದು‌ ನಿಮ್ಮ ಅಜ್ಞಾನ ಎಂದಾದರೆ ನಿಮಗೆ ದೇವರು ಸದ್ಬುದ್ದಿಯ ಆಶೀರ್ವಾದವನ್ನು ಮಾಡಲಿ ಎಂದು ಹಾರೈಸುತ್ತೇನೆ.” ಎಂದು ಸಿದ್ದರಾಮಯ್ಯ ಟಾಂಗ್‌ ನೀಡಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಸಂವಿಧಾನದತ್ತವಾದ ಸಮಾನ ಸ್ಥಾನಮಾನ, ಗೌರವ ಮತ್ತು ಹಕ್ಕುಗಳನ್ನು ಹೊಂದಿರುತ್ತವೆ ಎಂಬುದು ನೆನಪಿರಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ‌ ನಿಮ್ಮ‌ ಸರ್ವಾಧಿಕಾರಿ ಧೋರಣೆಗೆ ಅವಕಾಶ ಇಲ್ಲ ಎಂದು ಅವರು ಹೇಳಿದ್ದಾರೆ.

 

ಹೆಚ್ಚಿನ ಸುದ್ದಿ