Thursday, October 9, 2025
Homeರಾಜಕೀಯಸಿಎಂ ಬೊಮ್ಮಾಯಿ ಕಾರು ತಪಾಸಣೆ ಮಾಡಿದ ಚುನಾವಣಾಧಿಕಾರಿಗಳು

ಸಿಎಂ ಬೊಮ್ಮಾಯಿ ಕಾರು ತಪಾಸಣೆ ಮಾಡಿದ ಚುನಾವಣಾಧಿಕಾರಿಗಳು

ಬೆಂಗಳೂರು ಗ್ರಾಮಾಂತರ: ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಪೊಲೀಸರು ಅಕ್ರಮ ಹಣ, ಮದ್ಯ ಹಾಗೂ ಉಡುಗೊರೆ ಸಾಗಾಣಿಕೆ ಮೇಲೆ ಕಣ್ಣಿಟ್ಟಿದ್ದಾರೆ. ತಪಾಸಣಾ ಕಾರ್ಯಚರಣೆ ಭಾಗವಾಗಿ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಕಾರ್‌ ಕೂಡಾ ಪತಾಸಣೆಗೊಳಪಡಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಚೆಕ್​​ಪೋಸ್ಟ್​ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರನ್ನು ಚುನಾವಣಾ ಆಯೋಗದ ಅಧಿಕಾರಿಗಳು ಶುಕ್ರವಾರ ಅಂದರೆ ಮಾರ್ಚ್‌ 31 ತಪಾಸಣೆ ಮಾಡಿದ್ದಾರೆ. ದೊಡ್ಡಬಳ್ಳಾಪುರ ಬಳಿಯ ಘಾಟಿ ಸುಬ್ರಹ್ಮಣ್ಯ ತೆರಳುತ್ತಿದ್ದಾಗ ಘಟನೆ ನಡೆದಿದೆ. ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ತಂಡವು ಸಿಎಂ ಬೊಮ್ಮಾಯಿ ಅವರ ಕಾರನ್ನು ಪರಿಶೀಲಿಸಿದರು. ಯಾವುದೇ ರೀತಿಯ ಆಕ್ಷೇಪಾರ್ಹ ವಸ್ತುಗಳು ಸಿಗದ ಹಿನ್ನೆಲೆ ತಪಸಣೆ ಮಾಡಿ ಕಳುಹಿಸಿದ್ದಾರೆ. ಘಾಟಿ ಸುಬ್ರಮಣ್ಯನಿಗೆ ವಿಶೇಷ ಪೂಜೆ ಸಲ್ಲಿದ ಸಿಎಂ ಬೊಮ್ಮಾಯಿ

ಬಳಿಕ ವಿಶೇಷ ಪೂಜೆ ಸಲ್ಲಿಸಲು ಘಾಟಿ ಸುಬ್ರಮಣ್ಯಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದರು. ಕಳೆದ ಒಂದೂವರೆ ತಿಂಗಳಿಂದೆಯೆ ಪೂಜೆಗೆ ಆಗಮಿಸಲು ಸಿದ್ದವಾಗಿದ್ದರು. ಆದರೆ ಆಗ ಭೇಟಿ ನೀಡಲು ಆಗದ ಕಾರಣ ಇದೀಗ ನರಸಿಂಹ ಸಮೇತ ದೇವಾಲಯಕ್ಕೆ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಹೆಚ್ಚಿನ ಸುದ್ದಿ