Monday, March 2, 2026
Homeಚುನಾವಣೆ 2023ಜಗದೀಶ್ ಶೆಟ್ಟರ್ ರಾಜೀನಾಮೆ - ಬಿಜೆಪಿ ಡ್ಯಾಮೇಜ್ ಕಂಟ್ರೋಲ್

ಜಗದೀಶ್ ಶೆಟ್ಟರ್ ರಾಜೀನಾಮೆ – ಬಿಜೆಪಿ ಡ್ಯಾಮೇಜ್ ಕಂಟ್ರೋಲ್

ಹುಬ್ಬಳ್ಳಿ: ರಾಷ್ಟ್ರೀಯ ನಾಯಕರ ಮನವೊಲಿಕೆಯ ನಂತರವೂ ಜಗ್ಗದೆ ಜಗದೀಶ್ ಶೆಟ್ಟರ್ ಭಾನುವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಬಿಜೆಪಿಯಲ್ಲಿ ಆತಂಕ ಶುರುವಾಗಿದೆ. ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿರುವ ಬಿಜೆಪಿ ನಾಯಕರು ಪ್ರಲ್ಹಾದ್ ಜೋಷಿಯವರ ನೇತೃತ್ವದಲ್ಲಿ ಖಾಸಗಿ ಹೋಟೆಲ್‌ನಲ್ಲಿ ತುರ್ತು ಸಭೆ ಕರೆದಿದ್ದಾರೆ.


ನಗರ ಪಾಲಿಕೆ ಸದಸ್ಯರು, ಬಿಜೆಪಿಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಡನೆ ಚರ್ಚಿಸಲು ಸಿದ್ದವಾಗಿರುವ ಬಿಜೆಪಿ ನಾಯಕರು, ಪಕ್ಷದ ವಿರುದ್ಧ ಎಲ್ಲಿಯೂ ಹೇಳಿಕೆ ನೀಡದಂತೆ ಕಟು ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಜಗದೀಶ್ ಶೆಟ್ಟರ್ ಅವರನ್ನು ಹಿಂಬಾಲಿಸದಂತೆ, ಬೆಂಬಲಿಸದಂತೆ ನೇರವಾಗಿ ಎಲ್ಲರಿಗೂ ಸೂಚಿಸಲಾಗಿದ್ದು, ಪಕ್ಷದ ಅಭ್ಯರ್ಥಿಯ ಪರ ಪ್ರಚಾರದಲ್ಲಿ ತೊಡುಗುವಂತೆ ನಿರ್ದೇಶನ ನೀಡಲಾಗಿದೆ.


ಸದ್ಯಕ್ಕೆ ಸಭೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಡಾ. ಮಹೇಶ್ ನಲವಾಡ್, ಪಾಲಿಕೆ ಉಪಮೇಯರ್ ಉಮಾ ಮುಕುಂದ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಕಪಟಕರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದು, ಮತ್ತಷ್ಟು ಮಂದಿ ಸೇರುವ ನಿರೀಕ್ಷೆಯಿದೆ.


ಶೆಟ್ಟರ್ ಅವರನ್ನು ಬೆಂಬಲಿಸಿ ಯಾರೂ ಸಹ ರಾಜೀನಾಮೆಗೆ ಮುಂದಾಗದಂತೆ ತಡೆಯುವ ಪ್ರಯತ್ನದಲ್ಲಿ ಈ ರಹಸ್ಯ ಸಭೆ ಕರೆಯಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹೆಚ್ಚಿನ ಸುದ್ದಿ