ರಾಷ್ಟ್ರಾದ್ಯಂತ ಹೆದ್ದಾರಿಗಳ ಟೋಲ್ ಶುಲ್ಕವನ್ನು ಏ. 1 ರಿಂದ ಜಾರಿಯಾಗುವಂತೆ ಶೇ 7 ರಷ್ಟು ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿವರ್ಷವೂ ಏ.1 ರಿಂದ ಟೋಲ್ ಶುಲ್ಕ ಪರಿಷ್ಕರಣೆಗೊಳಿಸುವುದು ಸಾಮಾನ್ಯ ಪ್ರಕ್ರಿಯೆ. ಇದು ಕೇವಲ ಮೈಸೂರು ಹೆದ್ದಾರಿಗೆ ಮಾತ್ರ ಅನ್ವಯವಾಗುವುದಿಲ್ಲ . ಬೆಂಗಳೂರಿನಿಂದ ನಿಡಘಟ್ಟವರೆಗೆ 135 ರೂ ಟೋಲ್ ಅನ್ನು ಫಿಕ್ಸ್ ಮಾಡಿದ್ದೆವು, ಈಗ ಅದು 167 ರೂ. ಆಗಿದೆ. ಇದನ್ನು ಒಪ್ಕೊಳೋದು ಕಷ್ಟ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಎಲ್ಲಾ ಕಡೆ ಏರುವಂತೆ ಇಲ್ಲೂ ಏರಿಕೆ ಆಗಿದೆ, ಕೇವಲ 30 ರೂ. ಹೆಚ್ಚಾಗಿದೆ. ಈ ಬಗ್ಗೆ ನಾನು NHAI ಛೇರ್‌ಮೆನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ, ಈ ಬೆಲೆ ಏರಿಕೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಸೂಚಿಸಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಟೋಲ್ ಸಂಗ್ರಹ ಪ್ರಾರಂಭವಾಗಿ ಕೇವಲ 17 ದಿನಗಳಿಗೆ ಶುಲ್ಕ ಪರಿಷ್ಕರಣೆಗೊಂಡಿರುವ ಬೆಂಗಳೂರು – ಮೈಸೂರು ಹೆದ್ದಾರಿಯ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
