Tuesday, October 7, 2025
Homeಟಾಪ್ ನ್ಯೂಸ್ಪಾಕ್‌ ಪರ‌ ಘೋಷಣೆ ಪ್ರಕರಣ:‌ ಇಲ್ಲಿದೆ ನೋಡಿ ಸಖತ್‌ ಟ್ವಿಸ್ಟ್

ಪಾಕ್‌ ಪರ‌ ಘೋಷಣೆ ಪ್ರಕರಣ:‌ ಇಲ್ಲಿದೆ ನೋಡಿ ಸಖತ್‌ ಟ್ವಿಸ್ಟ್

ವೆಬ್ ಸೀರಿಸ್​ ವೊಂದರಲ್ಲಿ ಬರುವ ಡೈಲಾಗ್ ಹೇಳುತ್ತಿದ್ದ ಹುಡುಗನನ್ನು ಪಾಕಿಸ್ತಾನ​ ಪರ ಘೋಷಣೆ ಕೂಗಿದ್ದಾನೆ ಎಂದು ಕಿಡಿಗೇಡಿಗಳು ಪೊಲೀಸರ ದಾರಿ ತಪ್ಪಿಸಿರುವ ಬೆಂಗಳೂರಿನಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದಿಂದ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದ ಅಂಕುಶ್‌ ಎಂಬಾತ ಮೈಕೋ ಲೇಔಟ್‌ ಪ್ರದೇಶದಲ್ಲಿ ಫರ್ಝಿ ವೆಬ್‌ ಸೀರಿಸ್‌ ನೋಡುತ್ತಿರುವಾಗ, ಅದರಲ್ಲಿ ಬರುವ ಡೈಲಾಗ್‌ ಒಂದನ್ನು ಪುನರುಚ್ಚಿಸಿದ್ದಾನೆ

‘ಬಿಲಾಲ್, ಮನ್ಸೂರ್ ಚಾಹಿಯೇ… ಪಾಕಿಸ್ತಾನ್ ಜಾನಾ ಹೈ’ ಎಂಬ ಡೈಲಾಗ್‌ ಅನ್ನು ಅಂಕುಶ್‌ ಹೇಳಿದ್ದಾನೆ, ಇದನ್ನೇ ಪಾಕ್‌ ಪರ ಘೋಷಣೆ ಕೂಗಿದ್ದಾನೆಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪಾಕ್‌ ಪರ ಘೋಷಣೆ ಕೂಗಿದ್ದಾನೆಂದು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಅಂಕುಶ್‌ನನ್ನು ವಶಕ್ಕೆ ಪಡೆದಿದ್ದರು.

ವಿಚಾರಣೆ ಬಳಿಕ ಅಂಕುಶ್‌ ಅಮಾಯಕ ಎಂದು ತಿಳಿದು ಬಂದಿದ್ದು, ಮುಚ್ಚಳಿಕೆ ಬರೆದು ಕಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಂಕುಶ್, ಹೋಟೆಲ್ ಮ್ಯಾನೇಜ್‌ಮೆಂಟ್‌ ಪದವೀಧರನಾಗಿದ್ದು, ಪಶ್ಚಿಮ ಬಂಗಾಳದ ವೈದ್ಯರೊಬ್ಬರ ಮಗ. ಈತ ಕೆಲಸ ಹುಡುಕಿಕೊಂಡು ಜನವರಿಯಲ್ಲಿ ನಗರಕ್ಕೆ ಬಂದಿದ್ದ. ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ಉಳಿದುಕೊಂಡಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೆಚ್ಚಿನ ಸುದ್ದಿ