Monday, October 13, 2025
Homeಟಾಪ್ ನ್ಯೂಸ್ರಾಹುಲ್ ಗಾಂಧಿಗೆ ನೀಯತ್ತು ಎಂಬುದೇ ಇಲ್ಲ - ಸಿಟಿ ರವಿ

ರಾಹುಲ್ ಗಾಂಧಿಗೆ ನೀಯತ್ತು ಎಂಬುದೇ ಇಲ್ಲ – ಸಿಟಿ ರವಿ

ಯಾದಗಿರಿ: ರಾಹುಲ್ ಗಾಂಧಿಗೆ ದೇಶದ ಬಗ್ಗೆ ನೀಯತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದರು. ವಿದೇಶದಲ್ಲಿ ಭಾರತದ ಬಗ್ಗೆ ಟೀಕೆ ಮಾಡಿದವರಿಗೆ ದೇಶದ ಬಗ್ಗೆ ನೀಯತ್ತಿದೆ ಅಂತ ಹೇಳೋಕಾಗುತ್ತಾ ಎಂದು ಪ್ರಶ್ನೆ ಮಾಡಿದ್ರು.

ಯಾದಗಿರಿಯ ಶಹಾಪುರದಲ್ಲಿ ಮಾತನಾಡಿದ ರವಿ, ಕಾಂಗ್ರೆಸ್‌ನವರಿಗೆ ನೀತಿ ನಿಯತ್ತು ಇಲ್ಲ. ಯಾರು ನಮ್ಮ ದೇಶವನ್ನು ಇನ್ನೂರು ವರ್ಷಗಳ ಕಾಲ ಕೊಳ್ಳೆ ಹೊಡೆದರೋ ಅವರ ಬಳಿ ಸಹಾಯ ಕೇಳಲು ಹೋಗಿದ್ದಾರೆ. ವಿದೇಶಿಗರಿಂದ ಸಹಾಯ ಕೇಳುವ ಸ್ಥಿತಿಗೆ ಭಾರತ ಬಂದಿಲ್ಲ. ವಿದೇಶಿಗರ ಸಹಾಯ ಕೇಳುವುದು ದೇಶಕ್ಕೆ ದ್ರೋಹ ಮಾಡಿದಂತೆ. ಹೀಗಾಗಿ ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರಿಗೆ ನಮ್ಮ ದೇಶಕ್ಕೆ ಕಾಲಿಡುವ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.

ಹೆಚ್ಚಿನ ಸುದ್ದಿ