Monday, March 2, 2026
Homeಚುನಾವಣೆ 2023ಬಿಜೆಪಿ ಈಗ ಸ್ವಚ್ಛವಾಗಿದೆ- ರಮೇಶ್ ಜಾರಕಿಹೊಳಿ ಲೇವಡಿ

ಬಿಜೆಪಿ ಈಗ ಸ್ವಚ್ಛವಾಗಿದೆ- ರಮೇಶ್ ಜಾರಕಿಹೊಳಿ ಲೇವಡಿ

ಬೆಳಗಾವಿ : ಜಗದೀಶ್ ಶೆಟ್ಟರ್ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಈಗ ಸ್ವಚ್ಛವಾಗಿದೆ ಎಂದು ಲೇವಡಿ ಮಾಡಿದ್ದಾರೆ. ಪಕ್ಷ ಅವರಿಗೆ ಎಲ್ಲಾ ರೀತಿಯ ಸ್ಥಾನಮಾನ, ಗೌರವಗಳನ್ನು ನೀಡಿದ್ದರೂ ಸಹ ಪಕ್ಷ ತೊರೆದಿದ್ದು ವಿಶ್ವಾಸ ದ್ರೋಹ ಎಂದು ನುಡಿದಿದ್ದಾರೆ.
ಶನಿವಾರವಷ್ಟೇ ಲಕ್ಷ್ಮಣ್ ಸವದಿ ಪಕ್ಷ ತೊರೆದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಮೇಶ್ ಜಾರಕಿಹೊಳಿ, ಪೀಡೆ ತೊಲಗಿತು ಎನ್ನುವ ಮೂಲಕ ಸವದಿ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಲಕ್ಷ್ಮಣ್ ಸವದಿ ಬೆಳವು ಹೊಕ್ಕ ಮನೆ ಅಳಿವು ಎಂಬ ಗಾದೆಯನ್ನು ಉಲ್ಲೇಖಿಸಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ಕಾಂಗ್ರೆಸ್ ಪಕ್ಷ ನೆಲ ಕಚ್ಚಿತು. ಈಗ ಬಿಜೆಪಿ ಪಕ್ಷಕ್ಕೆ ಕಾಲಿರಿಸಿದ್ದು, ಪಕ್ಷವನ್ನು ನಿರ್ನಾಮ ಮಾಡಲಿದ್ದಾರೆ ಎಂದು ಹೇಳಿದ್ದರು.

ಹೆಚ್ಚಿನ ಸುದ್ದಿ