ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ. ಶ್ರೀರಾಮುಲು ಅವರು ನಾಮಪತ್ರ ಇಂದು ಸಲ್ಲಿಸಿದರು.ಈ ವೇಳೆ ಸಾವಿರಾರು ಬೆಂಬಲಿಗರು ರಾಮುಲುಗೆ ಸಾಥ್ ನೀಡಿದರು.
ಶ್ರೀರಾಮುಲು ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಸಹಾಯಕ ಆಯಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಅವರು ಧರ್ಮಪತ್ನಿ ಭಾಗ್ಯ ಲಕ್ಷ್ಮೀ, ನಗರ ಶಾಸಕ ಸೋಮಶೇಖರ್ ರೆಡ್ಡಿ ಶ್ರೀರಾಮುಲು ಪುತ್ರಿಯರು ಹಾಜರಿದ್ದರು.
