Monday, July 7, 2025
Homeಚುನಾವಣೆ 2023ಹಾಸನ ಕ್ಷೇತ್ರದಲ್ಲಿ ಇಂದು ದೇವೇಗೌಡ ಕುಟುಂಬದ ಶಕ್ತಿ ಪ್ರದರ್ಶನ

ಹಾಸನ ಕ್ಷೇತ್ರದಲ್ಲಿ ಇಂದು ದೇವೇಗೌಡ ಕುಟುಂಬದ ಶಕ್ತಿ ಪ್ರದರ್ಶನ

ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆ ಹಾಸನ ಜೆಡಿಎಸ್ ಟಿಕೆಟ್ ಗೊಂದಲದ ಗೂಡಾಗಿತ್ತು. ಈ ಟಿಕೆಟ್​ಗಾಗಿ ಹೆಚ್​ಡಿ ದೇವೇಗೌಡರ ಕುಟುಂಬದಲ್ಲಿ ಬಿರುಕು ಬಿಟ್ಟಿತ್ತು. ಇದೀಗ ಚುನಾವಣೆಗೆ ಗಮನ ಹರಿಸಿದ್ದು, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ನೇತೃತ್ವದಲ್ಲಿ ಇಂದು ರೋಡ್ ಶೋ‌ ಮೂಲಕ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ನಾಮ ಪತ್ರ ಸಲ್ಲಿಸಲಿದ್ದಾರೆ.

ಹಾಸನ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಹೆಂಡತಿ ಭವಾನಿ ರೇವಣ್ಣರನ್ನು ಸ್ಪರ್ಧೆಗೆ ಇಳಿಸಬೇಕು ಎಂದು ಹೆಚ್​ಡಿ ರೇವಣ್ಣ ಪಟ್ಟು ಹಿಡಿದಿದ್ದರು. ಆದ್ರೆ ಹೆಚ್​ಡಿ ಕುಮಾರಸ್ವಾಮಿ ಅವರು ಸ್ವರೂಪ್ ಮೇಲೆ ಒಲವು ತೋರಿಸಿದ್ದರು. ಹೀಗಾಗಿ ಇಬ್ಬರು ಸ್ಪರ್ಧಿಗಳ ನಡುವೆ ಜಟಾಪಟಿ ನಡೆಯುತ್ತಿತ್ತು. ಸದ್ಯ ಈಗ ಹಾಸನ ಜೆಡಿಎಸ್ ಟಿಕೆಟ್​​ನ್ನು ಸ್ವರೂಪ್​ ಅವರಿಗೆ ನೀಡಲಾಗಿದ್ದು ಎಲ್ಲಾ ಕೋಪವನ್ನು ಬಿಟ್ಟು ಹೆಚ್​ಡಿ ರೇವಣ್ಣ ಹಾಗೂ ಭವಾನಿಯವರು ಸ್ವರೂಪ್ ಪರ ಪ್ರಚಾರ ಮಾಡಲು ಅಖಾಡಕ್ಕೆ ಇಳಿದಿದ್ದಾರೆ. ಇಂದು ಸ್ವರೂಪ್ ನಾಮಪತ್ರ ಸಲ್ಲಿಸಲಿದ್ದು ಕ್ಷೇತ್ರದಲ್ಲಿಂದು ಗೌಡರ ಕುಟುಂಬದ ಶಕ್ತಿ ಪ್ರದರ್ಶನವಾಗಲಿದೆ.

ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಸ್ವರೂಪ್ ನಾಮಪತ್ರ ಸಲ್ಲಿಸಲಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿಂದು ಗೌಡರ ಕುಟುಂಬದ ಶಕ್ತಿ ಪ್ರದರ್ಶನವಾಗಲಿದೆ. ಅಭ್ಯರ್ಥಿ ಸ್ವರೂಪ್ ಗೆಲ್ಲಿಸಲು ಗೌಡರ ಇಡೀ ಕುಟುಂಬ ಅಖಾಡಕ್ಕಿಳಿಯಲಿದೆ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ನೇತೃತ್ವದಲ್ಲಿ ಇಂದು ರೋಡ್ ಶೋ‌ ಮೂಲಕ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ನಾಮ ಪತ್ರ ಸಲ್ಲಿಸಲಿದ್ದಾರೆ.

ರೋಡ್ ಶೋ‌ನಲ್ಲಿ ಹೆಚ್​ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ ಭಾಗಿಯಾಗಿ ಒಗ್ಗಟ್ಟಿನ ಪ್ರದರ್ಶನ ಮಾಡಲಿದ್ದಾರೆ. ಈ ಮೂಲಕ ಬಿಜೆಪಿಗೆ ಸೆಡ್ಡು ಹೊಡೆಯಲು ದಳಪತಿಗಳು ಸಜ್ಜಾಗಿದ್ದಾರೆ. ಸಾವಿರಾರು ಜನ ಸೇರಿಸಿ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಭಾಗಿಯಾಗಲಿದ್ದಾರೆ.

ಹೆಚ್ಚಿನ ಸುದ್ದಿ