Monday, March 2, 2026
Homeಚುನಾವಣೆ 2023ಸಿಎಂ ಕಾರಿಗೆ ತಪಾಸಣೆ ಏಕಿಲ್ಲ?- ಸುರ್ಜೇವಾಲಾ ಪ್ರಶ್ನೆ

ಸಿಎಂ ಕಾರಿಗೆ ತಪಾಸಣೆ ಏಕಿಲ್ಲ?- ಸುರ್ಜೇವಾಲಾ ಪ್ರಶ್ನೆ

ಬೆಂಗಳೂರು: ಎಚ್‌ಎಎಲ್ ವಿಮಾನನಿಲ್ದಾಣದಲ್ಲಿ ಪ್ರತಿಯೊಂದು ಕಾರ್ ಗಳನ್ನೂ ಸಹ ಪೊಲೀಸರು ತಪಾಸಣೆಗೊಳಪಡಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಕಾರ್‌ನ್ನು ಮಾತ್ರ ಯಾರೂ ತಡೆಯುತ್ತಲೂ ಇಲ್ಲ. ತಪಾಸಣೆಯನ್ನೂ ನಡೆಸುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್‌ದೀಪ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಈ ಕುರಿತು ಬುಧವಾರ ಟ್ವಿಟರ್ ಮುಖಾಂತರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಸಿಎಂ ಕಾರ್ ತಪಾಸಣೆಗೆ ಹೊರತಾಗಿರುವುದೇಕೆ? ಈ ಬಗ್ಗೆ ಬೇಕಾದರೆ ಸ್ಥಳೀಯ ಸಿಸಿಟಿವಿ ಕೆಮೆರಾದಲ್ಲಿ ಖಚಿತಪಡಿಸಿಕೊಳ್ಳಬಹುದು. ಭಾರತೀಯ ಚುನಾವಣಾ ಆಯೋಗ ಬಿಜೆಪಿಗೋಸ್ಕರ ಪ್ರತ್ಯೇಕ ನಿರ್ಬಂಧಗಳನ್ನೇನಾದರೂ ವಿಧಿಸಿದೆಯೇ ಎಂದು ಟೀಕಿಸಿದ್ದಾರೆ.
ಜೊತೆಗೆ ಭಾರತೀಯ ಚುನಾವಣಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗದಿಂದ ಇದುವರೆಗೂ ಯಾವುದೇ ಸ್ಪಷ್ಟೀಕರಣ ಬಂದಿಲ್ಲ.

ಹೆಚ್ಚಿನ ಸುದ್ದಿ