Monday, March 2, 2026
Homeಚುನಾವಣೆ 2023ಚಿಕ್ಕಪೇಟೆಯಲ್ಲಿ ಮತ್ತೆ ಆರ್‌ವಿ ದೇವರಾಜ್‌ಗೆ ಕೈ ಟಿಕೆಟ್

ಚಿಕ್ಕಪೇಟೆಯಲ್ಲಿ ಮತ್ತೆ ಆರ್‌ವಿ ದೇವರಾಜ್‌ಗೆ ಕೈ ಟಿಕೆಟ್

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಶನಿವಾರ ಬಿಡುಗಡೆಯಾಗಿದ್ದು, ಇದರಲ್ಲಿ ನಗರದ ಚಿಕ್ಕಪೇಟೆ ಕ್ಷೇತ್ರದಿಂದ ಆರ್.ವಿ.ದೇವರಾಜ್ ಗೆ ಮತ್ತೆ ಅವಕಾಶ ನೀಡಲಾಗಿದೆ. ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಹಾಲಿ ಶಾಸಕ ಉದಯ್ ಗರುಡಾಚಾರ್‌ಗೆ, ಆರ್‌ವಿಡಿ ಪ್ರತಿಸ್ಪರ್ಧೆ ನೀಡಲಿದ್ದಾರೆ.

ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಮೇಯರ್ ಗಂಗಾಂಬಿಕೆ ಮತ್ತು ಕೆಜಿಎಫ್ ಬಾಬು ಇಬ್ಬರೂ ತಮ್ಮ ಇಚ್ಛೆಯನ್ನು ಪ್ರಕಟಿಸಿದ್ದರು. ಟಿಕೆಟ್ ಕೈತಪ್ಪುವುದುರ ಸುಳಿವು ಸಿಗುತ್ತಿದ್ದಂತೆಯೇ ಗಂಗಾಂಬಿಕೆ ಚಿಕ್ಕಪೇಟೆಯಿಂದ ಶುಕ್ರವಾರ ಸ್ವತಂತ್ರ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಕೆಜಿಎಫ್ ಬಾಬು ಸಹ ತಮ್ಮ ಪತ್ನಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿದ್ದಾರೆ.

ಹೆಚ್ಚಿನ ಸುದ್ದಿ