Monday, July 7, 2025
Homeಬೆಂಗಳೂರುಕರ್ನಾಟಕ ಚುನಾವಣೆ: ಮತದಾನದ ಅರಿವು ಮೂಡಿಸಿದ ಸ್ಯಾಂಡಲ್‌ವುಡ್‌ ಸ್ಟಾರ್ಸ್

ಕರ್ನಾಟಕ ಚುನಾವಣೆ: ಮತದಾನದ ಅರಿವು ಮೂಡಿಸಿದ ಸ್ಯಾಂಡಲ್‌ವುಡ್‌ ಸ್ಟಾರ್ಸ್

ಬೆಂಗಳೂರು: ಚುನಾವಣಾ ದಿನಾಂಕ ಘೋಷಣೆಯಾಗಿದೆ.ಚುನಾವಣಾ ಆಯೋಗ ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು ಮತದಾರರನ್ನು ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಸ್ಯಾಂಡಲ್‌ ವುಡ್‌ ಸ್ಟಾರ್ಸ್ ಮೊರೆ ಹೋಗಿದೆ.

ವಿಶ್ವ ಮಟ್ಟದಲ್ಲಿ ಕರುನಾಡಿನ ಖ್ಯಾತಿ ಪಸರಿಸಿದ ಕಾಂತಾರ ಖ್ಯಾತಿಯ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹಾಗೂ ಸ್ವೀಟ್ ಸ್ಮೈಲ್ ಬೆಡಗಿ ಅಮೃತಾ ಅಯ್ಯಂಗಾರ್‌ರವರನ್ನು ಚುನಾವಣಾ ಆಯೋಗ ಬಳಸಿಕೊಡು ಸೋಷಿಯಲ್‌ ಮೀಡಿಯಾದ ಮೂಲಕ ಜನರಲ್ಲಿ ಮತದಾನದ ಕುರಿತು ಅರಿವು ಮೂಡಿಸುತ್ತಿದೆ

ಮೇ 10 ರಂದು ಎಲೆಕ್ಷನ್‌ ಘೋ‍ಷಣೆ ಮಾಡಿದ್ದಾರೆ. ಎಲ್ಲರೂ ತಪ್ಪದೇ ಬಂದು ಓಟ್‌ ಮಾಡಿ. ನಮ್ಮ ನಾಡಿನ ನೆಲ, ಜಲ, ಸಂಪನ್ಮೂಲ ಅಭಿವೃದ್ಧಿಗಾಗಿ, ನಮ್ಮ ಉತ್ತಮ ಬದುಕಿಗಾಗಿ ಎಲ್ಲರೂ ಅಮೂಲ್ಯವಾದ ಮತವನ್ನು ಚಲಾಯಿಸೋಣ ಎಂದು ಈ ತಾರೆಯರು ಜನರಲ್ಲಿ ಮನವಿ ಮಾಡಿದ್ದಾರೆ

ಹೆಚ್ಚಿನ ಸುದ್ದಿ