ನಾಮಪತ್ರ ಸಲ್ಲಿಕೆ ಅಂದ್ರೆನೇ ಶಕ್ತಿ ಪ್ರದರ್ಶನ ಅನ್ನೋ ರೀತಿಯಲ್ಲಿ ಅಭ್ಯರ್ಥಿಗಳು ಸಾವಿರಾರು ಕಾರ್ಯಕರ್ತರೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿ ಎಲ್ಲೆಡೆ ನಾಮಪತ್ರ ಸಲ್ಲಿಸ್ತಾ ಇದ್ರೆ, ಬೆಳಗಾವಿಯ ಸಾಹುಕಾರ್ ಮಾತ್ರ ಸಿಂಪಲ್ಲಾಗಿ ಬಂದು ನಾಮಪತ್ರ ಸಲ್ಲಿಸಿದರು. ಅದರಲ್ಲೂ ಈ ಬಾರಿಯೂ ಕೂಡ ರಾಹುಕಾಲದಲ್ಲಿಯೇ ನಾಮಪತ್ರ ಸಲ್ಲಿಸಿರುವುದು ಗಮನಾರ್ಹ.
ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ನಾಲ್ಕನೇ ಬಾರಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿರುವ ಅವರು, ಇದು ನನ್ನ ನಾಲ್ಕನೇ ವಿಧಾನಸಭಾ ಚುನಾವಣೆ. ಕಳೆದ ಮೂರು ಬಾರಿಯ ಚುನಾವಣೆಯಲ್ಲಿ ಕೂಡ ಕೆಲವೇ ಕೆಲವು ಕಾರ್ಯಕರ್ತರ ಜೊತೆ ಹೋಗಿ ನಾಮಪತ್ರ ಸಲ್ಲಿಕೆ ಮಾಡಿದ್ದು ಈ ಬಾರಿಯೂ ಕೂಡ ಅದೇ ರೀತಿ ಕೆಲವೇ ಕೆಲವು ಕಾರ್ಯಕರ್ತರ ಜೊತೆ ಹೋಗಿ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಅಂತ ಹೇಳಿದ್ರು.
ಹಾಗಾಗಿ ಯಾವ ಕಾರ್ಯಕರ್ತರು ಕೂಡ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗದೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗಿಯಾಗಬೇಕು ಅಂತ ಮನವಿ ಮಾಡಿಕೊಂಡಿದ್ದರು.