Monday, July 7, 2025
Homeಕ್ರೀಡೆಐಪಿಎಲ್ ವೀಕ್ಷಸಿದ ಶಿವಣ್ಣ- ಧನುಷ್

ಐಪಿಎಲ್ ವೀಕ್ಷಸಿದ ಶಿವಣ್ಣ- ಧನುಷ್

ಬೆಂಗಳೂರು: ನೆನ್ನೆ (ಏಪ್ರಿಲ್ 17) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಧನುಷ್ ಐಪಿಲ್‌ ಪಂದ್ಯ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ. ಐಪಿಎಲ್ ಟೂರ್ನಿಯ 24ನೇ ಪಂದ್ಯದಲ್ಲಿ ಬೆಂಗಳೂರು ಹಾಗೂ ಚೆನ್ನೈ ತಂಡಗಳು ಮುಖಾಮುಖಿಯಾಗಿದ್ದವು. ಬೆಂಳೂರು ಪರ ಶಿವಣ್ಣ ಬೆಂಬಲ ಸೂಚಿಸಿದ್ರೆ ಚೆನ್ನೈ ತಂಡದ ಪರ ಧನುಷ್‌ ಬೆಂಬಲ ಸೂಚಿಸಿದ್ದು. ಆದ್ರೆ ಇಬ್ಬರೂ ಒಟ್ಟಿಗೆ ಕೂತು ಪಂದ್ಯ ವೀಕ್ಷಿಸಿದ್ದು ವಿಶೇಷವಾಗಿತ್ತು

ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ತಮಿಳು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ರಜನಿಕಾಂತ್ ಜೊತೆ ಜೈಲರ್ ಸಿನಿಮಾದಲ್ಲಿ ನಟಿಸುತ್ತಿದ್ದರೆ, ಧನುಷ್ ಜೊತೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸತತವಾಗಿ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಧನುಷ್ ಮತ್ತು ಶಿವರಾಜ್ ಕುಮಾರ್ ಐಪಿಎಲ್ ಪಂದ್ಯ ವೀಕ್ಷಿಸಿದ್ದಾರೆ.

ಹೆಚ್ಚಿನ ಸುದ್ದಿ