Tuesday, October 7, 2025
Homeಚುನಾವಣೆ 2023ಸಿದ್ದರಾಮಯ್ಯ ತವರಲ್ಲಿ ಸಿಎಂ ಬೊಮ್ಮಾಯಿ ಫೀಲ್ಡಿಗೆ

ಸಿದ್ದರಾಮಯ್ಯ ತವರಲ್ಲಿ ಸಿಎಂ ಬೊಮ್ಮಾಯಿ ಫೀಲ್ಡಿಗೆ

ವರುಣಾ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಕಣಕ್ಕೆ ಇಳಿದಿರುವ ಸಚಿವ ವಿ ಸೋಮಣ್ಣ ಪರ ಸಿಎಂ ಬಸವರಾಜ ಬೊಮ್ಮಾಯಿ ಅಖಾಡಕ್ಕಳಿದಿದ್ದಾರೆ.

ಸಿದ್ದರಾಮಯ್ಯ ತವರಲ್ಲಿ ಬೊಮ್ಮಾಯಿ ಸಂಚಾರ ಆರಂಭಿಸಲಿದ್ದು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಬಸವರಾಜ ಬೊಮ್ಮಾಯಿ ಸಾಥ್‌ ಕೊಡಲಿದ್ದಾರೆ.

ಇಂದು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಲಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಮೈಸೂರಿಗೆ ಆಗಮಿಸಲಿದ್ದು, ಬೆಳಿಗ್ಗೆ 11 ಗಂಟೆಗೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ಬಳಿಕ,  ನಂಜನಗೂಡಿಗೆ ತೆರಳಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ನಂತರ ವರುಣ ಕ್ಷೇತ್ರದ ನಾಮಪತ್ರ ಸಲ್ಲಿಕೆಯ ವೇಳೆ ಸೋಮಣ್ಣ ಪರ ಭಾಗಿಯಾಗಲಿದ್ದು, ತದನಂತರ ತಿ.ನರಸೀಪುರಕ್ಕೆ ನಗರಕ್ಕೆ ತೆರಳಲಿದ್ದಾರೆ.

ಹೆಚ್ಚಿನ ಸುದ್ದಿ