ಮೈಸೂರು: ವರುಣಾ ವಿಧಾನಸಭೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸಚಿವ ಸೋಮಣ್ಣ ಸ್ಪರ್ಧೆ, ಹಣಾಹಣಿಗೆ ಹೈವೋಲ್ಟೇಜ್ ತಂದು ಕೊಟ್ಟಿದೆ.
ಇಂದು (ಮಂಗಳವಾರ) ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಸಿದ್ದರಾಮಯ್ಯ ಅವರು ಸ್ವಗ್ರಾಮ ಸಿದ್ದರಾಮನ ಹುಂಡಿಯ ಸಿದ್ದರಾಮೇಶ್ವರ ದೇವಾಲಯ ಹಾಗೂ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಬಿಜೆಪಿಯಿಂದ ಹಿಂದೂ ವಿರೋಧಿ ಎಂದು ಕರೆಸಿಕೊಳ್ಳುತ್ತಿರುವ ಸಿದ್ದರಾಮಯ್ಯ ದೇವಸ್ಥಾನ ಭೇಟಿ ಕುತೂಹಲ ಹುಟ್ಟಿಸಿದೆ.
ಇನ್ನು, ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಅವರ ದಿವಂಗತ ಪುತ್ರ ರಾಕೇಶ್ ಸಿದ್ದರಾಮಯ್ಯರ ಮಗ ಫೀಲ್ಡಿಗಿಳಿದಿದ್ದು, ತಾತನ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಧವನ್ ರಾಕೇಶ್ ಗೆ ತನ್ನ ತಂದೆಯಂತೆಯೇ ರಾಜಕೀಯದಲ್ಲಿ ಆಸಕ್ತಿ ಇದ್ದು, ಅಜ್ಜ ಸಿದ್ದರಾಮಯ್ಯರಂತೆ ಕಾನೂನು ಪದವಿ ಮಾಡಿ ರಾಜಕಾರಣಕ್ಕೆ ಧುಮುಕುವುದಾಗಿ ಹೇಳಿದ್ದಾರೆ.
