Monday, March 2, 2026
Homeಚುನಾವಣೆ 2023ವರುಣಾದಲ್ಲಿ ನಾನೇ ಗೆಲ್ಲೋದು: ಮಾಜಿ ಸಿಎಂ ಸಿದ್ದರಾಮಯ್ಯ

ವರುಣಾದಲ್ಲಿ ನಾನೇ ಗೆಲ್ಲೋದು: ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು: ಸೋಮಣ್ಣನಾದ್ರೂ ಬರಲಿ.. ಯಾರಾದ್ರೂ ಬರಲಿ.. ಈ ಬಾರಿ ವರುಣಾದಲ್ಲಿ ಗೆಲ್ಲೋದು ನಾನೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ನಾನು ಏ. 19ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಕೇವಲ ಒಂದು ದಿನ ಮಾತ್ರ ಇಲ್ಲಿ ಪ್ರಚಾರಕ್ಕೆ ಬರುತ್ತೇನೆ.. ಇಲ್ಲಿನ ಮತದಾರರ ಮೇಲೆ ನನಗೆ ವಿಶ್ವಾಸವಿದೆ ಹೀಗಾಗಿ ನಾನು ಈ ಬಾರಿ ಗೆಲುವು ಸಾಧಿಸೋದು ನಿಶ್ಚಿತ ಎಂದ್ರು.
ನನ್ನನ್ನು ಕಟ್ಟಿಹಾಕಲು ಬಿಜೆಪಿಯಿಂದ ಸೋಮಣ್ಣ ಸ್ಪರ್ಧಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಯಾರನ್ನೂ ಕಟ್ಟಿಹಾಕಲು ಸಾಧ್ಯವಿಲ್ಲ.. ಎಲ್ಲವೂ ಮತದಾರರ ನಿರ್ಧಾರದ ಮೇಲೆ ನಿಂತಿದೆ ಅಷ್ಟೇ ಎಂದ್ರು

ಇನ್ನು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸೋ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ವರಿಷ್ಠರು ಏನು ಹೇಳ್ತಾರೋ ಅದಕ್ಕೆ ನಾನು ಬದ್ಧ ಎಂದು ಸಿದ್ದರಾಮಯ್ಯ ಹೇಳಿದ್ರು.

ಹೆಚ್ಚಿನ ಸುದ್ದಿ