Tuesday, March 3, 2026
Homeಚುನಾವಣೆ 2023ಅಖಂಡ ಟೆಕೆಟ್‌ಗಾಗಿ ಸಿದ್ದು ಪಟ್ಟು- ಖರ್ಗೆ ಮನೆಯಲ್ಲಿ ಸಭೆ

ಅಖಂಡ ಟೆಕೆಟ್‌ಗಾಗಿ ಸಿದ್ದು ಪಟ್ಟು- ಖರ್ಗೆ ಮನೆಯಲ್ಲಿ ಸಭೆ

ಬೆಂಗಳೂರು: ಪುಲಕೇಶಿನಗರ ಕಾಂಗ್ರೆಸ್ ಟಿಕೆಟ್‌ ವಿಚಾರ ಇನ್ನೂ ಬಗೆಹರಿದಿಲ್ಲ. ಸಿದ್ದರಾಮಯ್ಯ ಆಪ್ತ ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಅವರು ಸ್ವತಂತ್ರವಾಗಿ ಕಣಕ್ಕಿಳಿದಿದ್ದಾರೆ. ಆದರೆ ಇನ್ನೂ ಕಾಂಗ್ರೆಸ್‌ ಟಿಕೆಟ್ ಘೋಷಣೆಯಾಗಿಲ್ಲ. ಮಾಜಿ ಮೇಯರ್ ಸಂಪತ್‌ರಾಜ್‌ ಗೆ ಟಿಕೆಟ್‌ ನೀಡುವ ಬಗ್ಗೆ ಡಿ.ಕೆ ಶಿವಕುಮಾರ್ ಒಲವು ತೋರಿದ್ದು ,ಅದನ್ನು ತಪ್ಪಿಸಲು ಸಿದ್ದರಾಮಯ್ಯ ಹರಸಾಹಸ ಮಾಡುತ್ತಿದ್ದಾರೆ

ಈ ಕುರಿತು ಇಂದು ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಜಮೀರ್‌ ಅಹ್ಮದ್ ಖಾನ್‌, ಅಖಂಡ ಪರ ಲಾಬಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಸಭೆ ನಂತರ ಮಾತನಾಡಿದ ಸಿದ್ದರಾಮಯ್ಯ, ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ನೀಡುವ ಕುರಿತು ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಖರ್ಗೆ ಹಾಗೂ ಸುರ್ಜೇವಾಲಾ ಕೂಡಾ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಟಿಕೆಟ್‌ ನೀಡುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದ್ರು.

ಹೆಚ್ಚಿನ ಸುದ್ದಿ