ಬೆಂಗಳೂರು: ರೌಡಿ ಶೀಟರ್ ಸೈಲೆಂಟ್ ಸುನೀಲ ಚಾಮರಾಜಪೇಟೆಯಲ್ಲಿ ಶ್ರೀರಾಮನವಮಿ ಪ್ರಯುಕ್ತ ಶೋಭಾಯಾತ್ರೆ ನಡೆಸಿದ್ದಾನೆ. ಸಿರ್ಸಿ ಸರ್ಕಲ್ನಿಂದ ಟಿ.ಆರ್ ಮಿಲ್ ಆಂಜನೇಯಸ್ವಾಮಿ ದೇವಾಲಯವರೆಗೆ ನಡೆದ ಶೋಭಾಯಾತ್ರೆಯಲ್ಲಿ ನೂರಾರು ಜನ ಭಾಗವಹಿಸಿ ರಾಮನವಮಿ ಆಚರಿಸಿದ್ದಾರೆ.
ಡೊಳ್ಳು, ನಗಾರಿ, ಡಿಜೆ ಸದ್ದಿನೊಂದಿಗೆ ಶೋಭಾಯಾತ್ರೆ ನಡೆದಿದ್ದು ಯಾತ್ರೆಗೆ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಚುನಾವಣೆ ತಯಾರಿ ನಡೆಸಿರುವ ಸೈಲೆಂಟ್ ಸುನೀಲ್ ರಾಮನವಮಿ ಆಚರಣೆ ನೆಪದಲ್ಲಿ ಯಾತ್ರೆ ನಡೆಸಿದ್ದಾನೆ ಎನ್ನಲಾಗ್ತಿದೆ.

ಈ ಹಿಂದೆ ಬಿಜೆಪಿ ಮುಖಂಡರೊಂದಿಗೆ ಕಾಣಿಸಿಕೊಂಡು ಚಾಮರಾಜಪೇಟೆ ಕ್ಷೇತ್ರದಿಂದ ಸೈಲೆಂಟ್ ಸುನೀಲನಿಗೆ ಬಿಜೆಪಿ ಟೆಕೆಟ್ ನೀಡುತ್ತೆ ಎಂಬ ಮಾತಿತ್ತು. ಆದ್ರೆ ನಂತರ ಬಿಜೆಪಿ ಪಕ್ಷಕ್ಕೂ ಸೈಲೆಂಟ್ ಸುನೀಲನಿಗೂ ಯಾವುದೇ ಸಂಬಂಧ ಇಲ್ಲ ಎಂದು ಅಧಿಕೃತ ಪ್ರಕಟಣೆಯನ್ನೂ ಹೊರಡಿಸಿತ್ತು. ಹೀಗಿರುವಾಗ ಸೈಲೆಂಟ್ ಸುನೀಲ್ ಪಕ್ಷೇತರರಾಗಿ ಕಣಕ್ಕಿಳೀತಾರಾ ಎಂಬ ಚರ್ಚೆಗಳೂ ಪ್ರಾರಂಭವಾಗಿದೆ.