ವರುಣಾ: ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿಯಲಿರುವ ಸಚಿವ ಸೋಮಣ್ಣ ಸೋಮವಾರ ವರುಣಾ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾಗೂ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದ್ರು.
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದ ಸೋಮಣ್ಣ, ಮೈಸೂರಿನ ಶ್ರೀ ಕೋಟೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಯೂ ಪೂಜೆ ಸಲ್ಲಿಸಿದ್ರು.

ಸೋಮಣ್ಣ ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ಏರ್ಪಡಿಸಲಾಗಿತ್ತು. ವಿ ಸೋಮಣ್ಣ ಅವರು ಬೃಹತ್ ರೋಡ್ ಶೋ ಕೂಡ ನಡೆಸಿ, ಶಕ್ತಿ ಪ್ರದರ್ಶನ ಕೂಡ ನಡೆಸಿದ್ದಾರೆ.
ವರುಣಾ ವರ್ಣಮಯ ಆಗಿದೆ. ಇಷ್ಟು ವರ್ಷ ವರುಣಾದ ಹೆಸರು ಮೈಸೂರು ಜಿಲ್ಲೆ ದಾಟಿ ಹೋಗಿರಲಿಲ್ಲ. ಒಬ್ಬ ವ್ಯಕ್ತಿ, ಒಬ್ಬ ಶಕ್ತಿ ವರುಣಾಗೆ ಬಂದ ಮೇಲೆ ವರುಣಾ ಹೆಸರು ಇಡೀ ಭಾರತಕ್ಕೆ ಹಬ್ಬಿದೆ. ಆ ಶಕ್ತಿ ವಿ ಸೋಮಣ್ಣ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.