Saturday, June 27, 2026
Homeದೇಶಸರಕು ಸಾಗಣೆಯಿಂದ 4,600 ಕೋಟಿ ರೂ.: ಹೊಸ ದಾಖಲೆ ಬರೆದ ನೈರುತ್ಯ ರೈಲ್ವೆ

ಸರಕು ಸಾಗಣೆಯಿಂದ 4,600 ಕೋಟಿ ರೂ.: ಹೊಸ ದಾಖಲೆ ಬರೆದ ನೈರುತ್ಯ ರೈಲ್ವೆ

ಬೆಂಗಳೂರು: ದೇಶದ ನೈಋತ್ಯ ರೈಲ್ವೆಯು ಸರಕು ಸಾಗಣೆಯಿಂದ 4,600 ಕೋಟಿ ರೂಪಾಯಿ ಆದಾಯವನ್ನು ದಾಖಲಿಸಿ, ದಾಖಲೆ ಬರೆದಿದೆ.

ಕಳೆದ 15 ವರ್ಷಗಳಲ್ಲಿ ಮೊದಲ ಬಾರಿಗೆ, ನೈಋತ್ಯ ರೈಲ್ವೆ 46 ಮಿಲಿಯನ್ ಟನ್‌ಗಳಷ್ಟು ಇದ್ದ ಈ ಹಿಂದಿ‌ನ ದಾಖಲೆ ಮುರಿದಿದೆ. 2007-08 ರಲ್ಲಿ ನೈಋತ್ಯ ರೈಲ್ವೆ 46.24 ಮಿಲಿಯನ್ ಟನ್ ಸರಕುಗಳನ್ನು ಸಾಗಿಸಿತ್ತು. 2022-23ರಲ್ಲಿ ಇದನ್ನು ಮೀರಿಸಿದ 46.7 ಮಿಲಿಯನ್ ಟನ್ ಸರಕು ಸಾಗಣೆ ಮಾಡಲಾಗಿದೆ.

ಅಗತ್ಯ ವಸ್ತುಗಳ ಪೂರೈಕೆಯ ಇಡೀ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ರೈಲ್ವೆ ಪ್ರಮುಖ ಪಾತ್ರ ವಹಿಸುತ್ತದೆ.
ಬೃಹತ್ ಸರಕು, ಕಚ್ಚಾ ಸಾಮಗ್ರಿಗಳನ್ನು ಕೈಗಾರಿಕೆಗಳಿಗೆ ಹಾಗೂ ಸಿದ್ಧಪಡಿಸಿದ ಸರಕುಗಳನ್ನು ಉದ್ಯಮದಿಂದ ರಫ್ತು/ಬಳಕೆಯ ಕೇಂದ್ರಗಳಿಗೆ ತ್ವರಿತ, ಸುರಕ್ಷಿತ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಸಾಗಾಟ ಮಾಡುವಲ್ಲಿ ರೈಲ್ಬೆಯ ಪಾತ್ರ ಮಹತ್ವದ್ದು.

ಹೆಚ್ಚಿನ ಸುದ್ದಿ