ಹೊಸದಿಲ್ಲಿ: ಚಂದ್ರ, ಮಂಗಳ ಮತ್ತು ಅದರಾಚೆಗೆ ಗಗನಯಾತ್ರಿಗಳನ್ನು ಕಳುಹಿಸಲು ವಿನ್ಯಾಸಗೊಳಿಸಲಾದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಸ್ಫೋಟಗೊಂಡಿದೆ.
ಎಲಾನ್ ಮಸ್ಕ್‌ರ ಕನಸಿನ ಯೋಜನೆಗಳಲ್ಲೊಂದಾದ ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್, ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಖಾಸಗಿ ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನಿಲ್ದಾಣವಾದ ಸ್ಟಾರ್‌ಬೇಸ್‌ನಿಂದ ಬೆಳಿಗ್ಗೆ 8:33 ಕ್ಕೆ ಯಶಸ್ವಿಯಾಗಿ ಉಡಾವಣೆ ಆಯಿತಾದರೂ ಮೂರು ನಿಮಿಷಗಳಲ್ಲೇ ಸ್ಪೋಟಗೊಂಡಿತು.
ಸ್ಟಾರ್‌ಶಿಪ್ ಕ್ಯಾಪ್ಸುಲ್ ಅನ್ನು ಮೊದಲ ಹಂತದ ರಾಕೆಟ್ ಬೂಸ್ಟರ್‌ನಿಂದ ಮೂರು ನಿಮಿಷಗಳ ನಂತರ ಬೇರ್ಪಡಿಸಲು ನಿಗದಿಪಡಿಸಲಾಗಿತ್ತು ಆದರೆ ಬೇರ್ಪಡುವಿಕೆ ವಿಫಲವಾದ ಕಾರಣ ಸ್ಟಾರ್‌ಶಿಪ್ ಸ್ಪೋಟಗೊಂಡಿದೆ.
— Elon Musk (@elonmusk) April 20, 2023