ಸುಡಾನ್: ಸುಡಾನ್‌ನಲ್ಲಿ ಸೇನೆ ಹಾಗೂ ಅರೆಸೇನೆಯ ನಡುವಿನ ಸಂಘರ್ಷದಲ್ಲಿ ದಾವಣಗೆರೆಯ 5 ಜನ ಸೇರಿ ಕರ್ನಾಟಕದ ಒಟ್ಟು 31 ಮಂದಿ ಸಿಲುಕಿಕೊಂಡಿದ್ದಾರೆ. ನಡುವೆ ನಡೆದ ಗುಂಡಿನ ದಾಳಿಯಿಂದ ದೇಶವೇ ಆತಂಕಕ್ಕೀಡಾಗಿದ್ದು, ಜನಜೀವನ ದುಸ್ತರವಾಗಿದೆ.
ಇಲ್ಲಿನ ಅಲ್‌ಫಷೀರ್ ನಗರದಲ್ಲಿ ಸ್ವತಃ ಅವರುಗಳೇ ಫೋಟೋ, ವಿಡಿಯೋಗಳನ್ನು ಕಳಿಸುವ ಮೂಲಕ ತಮ್ಮನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕರ್ನಾಟಕದ 31 ಮಂದಿಯಲ್ಲಿ ಶಿವಮೊಗ್ಗದ 7, ದಾವಣಗೆರೆ ಚನ್ನಗಿರಿಯ 5, ಮೈಸೂರು ಹುಣಸೂರಿನ 19 ಜನ ಸಿಲುಕಿಕೊಂಡಿದ್ದಾರೆ. ಇವರೆಲ್ಲಾ ಕೂಲಿ ಕಾರ್ಮಿಕರಾಗಿದ್ದು, ಕೆಲಸ ಅರಸಿ ಸುಡಾನ್‌ಗೆ ತೆರಳಿದ್ದರು. ಸದ್ಯ ಗುಂಡಿನ ದಾಳಿಗಳು ನಡೆಯುತ್ತಿರುವುದರಿಂದ ಮಹಿಳೆಯರು ಆತಂಕದಲ್ಲಿದ್ದಾರೆ. ಸರ್ಕಾರ ನಮ್ಮನ್ನು ಇಲ್ಲಿಂದ ತೆರವು ಮಾಡಲು ನೆರವು ನೀಡಬೇಕು. ಸುಡಾನ್‌ನಲ್ಲಿ ಸಿಲುಕಿರುವ 31 ಜನ ಕನ್ನಡಿಗರಲ್ಲಿ ಬಹುತೇಕರು ಗಿಡಮೂಲಿಕೆಗಳ ಔಷಧಿ ಮಾರಾಟ ಮಾಡಲು ತೆರಳಿದ್ದರು ಎಂದು ತಿಳಿದುಬಂದಿದೆ.
ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಪ್ರಸ್ತುತ ಘರ್ಷಣೆಯನ್ನು ಗಮನದಲ್ಲಿಟ್ಟುಕೊಂಡು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ಮತ್ತು ಸಹಾಯವನ್ನು ಒದಗಿಸಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಅಲ್ಲಿ ಸಿಲುಕಿರುವ ಭಾರತೀಯರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು. 1800 11 8797 (Toll free) +91-11- 23012113; +91-11-23014104; +91-11-23017905; 23: +91 9968291988, Email: situationroom@mea.gov.in
ಸುಡಾನ್‌ನ ಮಿಲಿಟರಿ ಮತ್ತು ದೇಶದ ಪ್ರಮುಖ ಅರೆಸೇನಾ ಪಡೆಗಳ ನಡುವಿನ ಸಮರದಲ್ಲಿ ಇಲ್ಲಿಯವರೆಗೂ ಕನಿಷ್ಠ 180 ನಾಗರಿಕರು ಸಾವನ್ನಪ್ಪಿದ್ದು, ಮತ್ತು 1,800 ಕ್ಕೂ ಹೆಚ್ಚು ನಾಗರಿಕರು ಮತ್ತು ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.