Monday, July 7, 2025
Homeಚುನಾವಣೆ 2023ನಟ ಸುದೀಪ್ ಗೂ ತಟ್ಟಿದ ನೀತಿ ಸಂಹಿತೆ ಬಿಸಿ!

ನಟ ಸುದೀಪ್ ಗೂ ತಟ್ಟಿದ ನೀತಿ ಸಂಹಿತೆ ಬಿಸಿ!

ಬಿಜೆಪಿ ಪರ ಸ್ಟಾರ್ ಕ್ಯಾಂಪೇನರ್ ಆಗಿರುವ ನಟ ಕಿಚ್ಚ ಸುದೀಪ್ ಅವರಿಗೆ ಚುನಾವಣೆ ನೀತಿ ಸಂಹಿತೆ ಬಿಸಿ ತಟ್ಟಿದೆ. ಸರ್ಕಾರಿ, ಆಸ್ತಿ, ಪೊಲೀಸ್ ಬ್ಯಾರಿಕೇಡ್ ಸೇರಿದಂತೆ ಎಲ್ಲೆಡೆ ಬಿತ್ತರವಾಗಿರುವ ಸುದೀಪ್ ಅವರ ಜಾಹೀರಾತು ಭಾವಚಿತ್ರಗಳನ್ನು ತೆಗೆದು ಹಾಕಲಾಗುತ್ತಿದೆ.

ಹಿರಿಯ ಅಧಿಕಾರಿಗಳ ತುರ್ತು ಸೂಚನೆ ಅನ್ವಯ ಬೆಂಗಳೂರು ಗ್ರಾಮೀಣ, ನಗರಸಭೆ ಮತ್ತು ಪಟ್ಟಣಪಂಚಾಯಿತಿ ವ್ಯಾಪ್ತಿಯಲ್ಲಿ ಸುದೀಪ್‌ಗೆ ಸಂಬಂಧಿಸಿದ ಭಾವಚಿತ್ರ ಜಾಹೀರಾತುಗಳನ್ನು ಅಧಿಕಾರಿಗಳು ತೆರವು ಮಾಡುತ್ತಿದ್ದಾರೆ. ಪ್ರಸ್ತುತ ಅವರು ಸಿಎಂ ಬೊಮ್ಮಾಯಿ ಪರಾಗಿ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ. ಆದ್ದರಿಂದ ಅವರ ಸಿನಿಮಾ, ಜಾಹೀರಾತು, ಪೋಸ್ಟರ್ ಮುಂತಾದುವುಗಳು ಬಿತ್ತರಿಸುವ ಮೂಲಕ ಮತದ ಮೇಲೆ ಪ್ರಭಾವ ಬೀರುತ್ತೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್‌ ಸುರ್ಜೇವಾಲ ಸೇರಿದಂತೆ ಜೆಡಿಎಸ್ ಸಹ ಚುನಾವಣೆ ಆಯೋಗಕ್ಕೆ ದೂರು ನೀಡಿತ್ತು.

ಹೆಚ್ಚಿನ ಸುದ್ದಿ