Monday, March 2, 2026
Homeಚುನಾವಣೆ 2023ಮಂಡ್ಯ ಜೆಡಿಎಸ್​ನ ಭದ್ರಕೋಟೆ ಅನ್ನೋದು ಹಾಸ್ಯಾಸ್ಪದ: ಸುಮಲತ

ಮಂಡ್ಯ ಜೆಡಿಎಸ್​ನ ಭದ್ರಕೋಟೆ ಅನ್ನೋದು ಹಾಸ್ಯಾಸ್ಪದ: ಸುಮಲತ

ಮಂಡ್ಯ ಜಿಲ್ಲೆ ಜೆಡಿಎಸ್​ನ ಭದ್ರಕೋಟೆ ಅನ್ನೋದು ಹಾಸ್ಯಾಸ್ಪದ.ಯಾಕಂದ್ರೆ ಯಾರ‍್ಯಾರೋ ಹೋಗಿದ್ದಾರೆಂದು ಇತಿಹಾಸ ನೋಡಿದರೆ ತಿಳಿಯುತ್ತೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ಮಂಡ್ಯದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಟಾರ್ಗೆಟ್ ಇರುವುದು ಭ್ರಷ್ಟ ರಾಜಕಾರಣದ ವಿರುದ್ಧ ಮಾತ್ರ. ಜೆಡಿಎಸ್​ ಶಾಸಕ ಸಿ.ಎಸ್.ಪುಟ್ಟರಾಜು ವಿರುದ್ಧ ಸಿಬಿಐ ಪ್ರಕರಣವಿದೆ. ಜೇಬಲ್ಲಿ ಕೆಂಡ ಇಟ್ಟುಕೊಂಡು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಮಂಡ್ಯಕ್ಕೆ ಜೆಡಿಎಸ್ ನಾಯಕರ ಕೊಡುಗೆ ಏನಿದೆ ಎಂದು ತೋರಿಸಲಿ. ಅಶೋಕ್ ಜಯರಾಮ್​ಗೆ ಜೆಡಿಎಸ್​ನಿಂದ ಅನ್ಯಾಯ ಆಗಿದೆ. ನನ್ನ ಮಗ ಬೇರೆ ಅಲ್ಲ ಎಸ್.ಟಿ ಜಯರಾಮ್​ ಮಗ ಬೇರೆ ಅಲ್ಲ. ಆದರೆ ಕುಮಾರಸ್ವಾಮಿಯವರು ಏನು ಮಾಡಿದರು. ಈ ಬಾರಿ ಜಯರಾಮ್​ಗೆ ಜನ ಆಶೀರ್ವದಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು
ಅಂಬರೀಶ್​ನಿಂದ ಏನು ಪ್ರಯೋಜನವಿಲ್ಲವೆಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, 2018ರಲ್ಲಿ ಕುಮಾರಸ್ವಾಮಿ ಸಿಎಂ ಆಗೋಕೆ ಕಾರಣ ಯಾರು ಎಂದು ಪ್ರಶ್ನಿಸಿದರು. ಅಪಮಾನ ಆಗಿದ್ದಕ್ಕೆ ಅಂಬರೀಶ್​ ಅಭಿಮಾನಿಗಳಿಂದ ತಕ್ಕ ಪಾಠ ಮಾಡಲಾಯಿತು. ಕಾಂಗ್ರೆಸ್​ಗೆ ಅಂಬರೀಶ್​ ಅಭಿಮಾನಿಗಳು ತಕ್ಕ ಪಾಠ ಕಲಿಸಿದ್ದಾರೆ. ಹಾಗಾಗಿಯೇ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆದರು. ಆಗ ಮೊದಲನೇ ದಿನವೇ ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋದರು. ಮಂಡ್ಯಕ್ಕೆ ಈ ನಾಯಕರ ಕೊಡುಗೆ ಏನಿದೆ ಎಂದು ತೋರಿಸಲಿ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ಹೆಚ್ಚಿನ ಸುದ್ದಿ