ಹಾಸನ: ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪರ ಮತಯಾಚನೆಗೆ ಮಾಡಿರುವ ಭವಾನಿ ರೇವಣ್ಣ, ಸ್ವರೂಪ್ ನನ್ನ ಮಗನಿದ್ದಂತೆ, ಆತನನ್ನು ಗೆಲ್ಲಿಸಬೇಕೆಂದು ಕರೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಹಾಸ ಟಿಕೆಟ್‌ಗಾಗಿ ಭವಾನಿ ರೇವಣ್ಣ ಪ್ರಯತ್ನ ಪಟ್ಟಿದ್ದರು. ರೇವಣ್ಣ ಅವರು ಎಷ್ಟು ಪ್ರಯತ್ನ ಪಟ್ಟರೂ ಹಾಸನ ಟಿಕೆಟ್ ಭವಾನಿ ಕೈ ತಪ್ಪಿ ಹೆಚ್‌ಡಿಕೆ ಅಭಿಲಾಷೆಯಂತೆ ಸ್ವರೂಪ್ ಪಾಲಾಗಿತ್ತು. ಈ ಹಿನ್ನೆಲೆಯಲ್ಲಿ ರೇವಣ್ಣ vs ಹೆಚ್‌ಡಿಕೆ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತೆ ಎಂಬ ಆತಂಕ ದಳ ಪಾಳೆಯದಲ್ಲಿತ್ತು.
ಆದರೆ, ಬುಧವಾರ ಸ್ವರೂಪ್ ಪರ ಮತಯಾಚನೆಗೆ ಬಂದ ಭವಾನಿ, ತಮ್ಮ ಬೆಂಬಲವನ್ನು ಸ್ವರೂಪ್ ಗೆ ನೀಡಿದ್ದಾರೆ. ತನ್ನ ಪಕ್ಕದಲ್ಲಿ ನಿಲ್ಲಿಸಿ ಸ್ವರೂಪ್ ಪರ ಮತ ಯಾಚನೆಯನ್ನು ಭವಾನಿ ರೇವಣ್ಣ ಮಾಡುತ್ತಿದ್ದಂತೆ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿದೆ.
ಸ್ವರೂಪ್ ಅವರು ಭವಾನಿ ರೇವಣ್ಣ ಅವರ ಕಾಲಿಗೆ ಬಿದ್ದು ಆಶಿರ್ವಾದವನ್ನು ಪಡೆದುಕೊಂಡಿದ್ದಾರೆ.