Monday, July 7, 2025
Homeಟಾಪ್ ನ್ಯೂಸ್ನಂದಿನಿಯನ್ನು ಮೆಚ್ಚಿದ ರಾಹುಲ್‌ ರನ್ನು ಕೆಣಕಿದ ತೇಜಸ್ವಿ ಸೂರ್ಯ: ನೆಟ್ಟಿಗರಿಂದ ತರಾಟೆ

ನಂದಿನಿಯನ್ನು ಮೆಚ್ಚಿದ ರಾಹುಲ್‌ ರನ್ನು ಕೆಣಕಿದ ತೇಜಸ್ವಿ ಸೂರ್ಯ: ನೆಟ್ಟಿಗರಿಂದ ತರಾಟೆ

ಬೆಂಗಳೂರು: ನಂದಿನಿಯ ಐಸ್‌ಕ್ರೀಮ್‌ ಸವಿದು ಮೆಚ್ಚುಗೆ ವ್ಯಕ್ತಪಡಿಸಿರುವ  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ತೇಜಸ್ವಿ ಸೂರ್ಯ ಕೆಣಕಿದ್ದಾರೆ.

“ನಂದಿನಿಯೇ ಬೆಸ್ಟ್ ಎಂದು ರಾಹುಲ್ ಗಾಂಧಿ ಭಾವಿಸಿರುವುದು ಸಂತಸ ತಂದಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಕೇರಳದಲ್ಲಿ ನಂದಿನಿಯ ಸುಗಮ ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಮಧ್ಯಪ್ರವೇಶಿಸಲು ನಾನು ಅವರನ್ನು ವಿನಂತಿಸುತ್ತೇನೆ. ಇಲ್ಲದಿದ್ದರೆ, ಇದು ಕೂಡಾ ಮತ್ತೊಂದು ಗಿಮಿಕ್ ಆಗುತ್ತದೆ. ಕೇರಳದಲ್ಲಿ ನಂದಿನಿಯ ಮುಕ್ತ ಪ್ರವೇಶಕ್ಕೆ ರಾಹುಲ್ ಗಾಂಧಿ ಸಾರ್ವಜನಿಕ ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷಿಸುತ್ತೇನೆ.” ಎಂದು ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿದ್ದರು.

ಕೇರಳದ ಮಾರುಕಟ್ಟೆಯಲ್ಲಿ ನಂದಿನಿ ತನ್ನ ಉತ್ಪನ್ನ ಮಾರಟ ಮಾಡುವುದಕ್ಕೆ  ಆಕ್ಷೇಪಗಳ ಎದ್ದಿದ್ದು, ರಾಜ್ಯದಲ್ಲಿ ಅಮೂಲ್‌ ವಿರುದ್ಧ ಎದ್ದ ಆಕ್ರೋಶದಂತೆ, ಕೇರಳದಲ್ಲಿ ನಂದಿನಿ ವಿರುದ್ಧವೂ ಅಪಸ್ವರ ಬಂದಿದ್ದವು. ಈ ಹಿನ್ನೆಲೆಯಲ್ಲಿ  ತೆಜಸ್ವಿ ಸೂರ್ಯ ಈ ಟ್ವೀಟ್‌ ಮಾಡಿದ್ದಾರೆ.

ತೇಜಸ್ವಿ ಸೂರ್ಯ ಟ್ವೀಟ್‌ಗೆ ಹಲವು ನೆಟ್ಟಿಗರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ಹೇಗೆ ನೀವು ಅಮುಲ್ ಗೆ ಬಕೆಟ್‌ ಹಿಡಿದ ಹಾಗೆ ರಾಹುಲ್‌ ಗಾಂಧಿ ನಂದಿನಿಗೆ ಬಕೆಟ್‌ ಹಿಡಿಯಬೇಕೆ ಎಂದು ಪ್ರಶ್ನಿಸಿದ್ದಾರೆ.

ಹೆಚ್ಚಿನ ಸುದ್ದಿ