Monday, March 2, 2026
Homeಟಾಪ್ ನ್ಯೂಸ್ಸೇನಾ ವಾಹನದ ಮೇಲೆ‌ ಉಗ್ರ ದಾಳಿ: ಐವರು ಯೋಧರು ಹುತಾತ್ಮ

ಸೇನಾ ವಾಹನದ ಮೇಲೆ‌ ಉಗ್ರ ದಾಳಿ: ಐವರು ಯೋಧರು ಹುತಾತ್ಮ

ನವದೆಹಲಿ: ಜಮ್ಮು ಕಾಶ್ಮೀರದ ರಾಜೌರಿಯ ಪೂಂಚ್ ನಲ್ಲಿ ಸೈನಿಕರು ಸಾಗುತ್ತಿದ್ದ ವಾಹನದ ಒಂದರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಐವರು ಯೋಧರು ಹುತಾತ್ಮರಾಗಿದ್ದಾರೆ.

ಅಪರಾಹ್ನ ಮೂರು ಗಂಟೆಯ ಹೊತ್ತಿಗೆ ಭಯೋತ್ಪಾದಕರು ವಾಹನದ ಮೇಲೆ ಗುಂಡಿನ ಮಳೆಗರೆದಿದ್ದು, ಯೋಧರು ಮೃತಪಟ್ಟಿದ್ದಾರೆ ಮತ್ತು ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ. ಇದು ಗ್ರೆನೇಡ್ ದಾಳಿಯ ಪರಿಣಾಮ ಆಗಿರಬಹುದು ಎಂದು ಅಂದಾಜಿಸಲಾಗಿದ್ದು, ಸೇನಾವಾಹನ ಹೊತ್ತಿ ಉರಿದಿದೆ

ಭಾರಿ ಮಳೆ ಮತ್ತು ಮಂದ ಬೆಳಕನ್ನು ಉಪಯೋಗಿಸಿಕೊಂಡ ಭಯೋತ್ಪಾದಕರು ಮರೆಯಲ್ಲಿ ನಿಂತು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

 

ಹೆಚ್ಚಿನ ಸುದ್ದಿ