Monday, October 13, 2025
Homeಟಾಪ್ ನ್ಯೂಸ್ಆನ್‌ಲೈನ್‌ ಜೂಜಿಗೆ ಅಂತಿಮ ಮೊಳೆ ಹೊಡೆಯಲು ತಮಿಳುನಾಡು ಸರ್ಕಾರ ಸಿದ್ಧತೆ

ಆನ್‌ಲೈನ್‌ ಜೂಜಿಗೆ ಅಂತಿಮ ಮೊಳೆ ಹೊಡೆಯಲು ತಮಿಳುನಾಡು ಸರ್ಕಾರ ಸಿದ್ಧತೆ

ಸಾವಿರಾರು ಕುಟುಂಬಗಳನ್ನು ಸರ್ವನಾಶ ಮಾಡಿರುವ ಆನ್‌ಲೈನ್‌ ಜೂಜಾಟಕ್ಕೆ ಅಂತಿಮ ಮೊಳೆ ಹೊಡೆಯಲು ತಮಿಳುನಾಡು ಸರ್ಕಾರ ಮುಂದಾಗಿದೆ. ಆನ್‌ಲೈನ್‌ ಜೂಜಾಟಕ್ಕೆ ನಿಷೇಧ ಹೇರುವ ಮಸೂದೆಯನ್ನು ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ಮಸೂದೆಯನ್ನು ಮಂಡಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು, ಆನ್‌ಲೈನ್‌ ಜೂಜಾಟಕ್ಕೆ ಬಲಿಯಾದವರನ್ನು ನೆನಪಿಸಿದ್ದು, ಆನ್‌ಲೈನ್‌ ಜೂಜಾಟದಿಂದ ಹಣ ಕಳೆದುಕೊಂಡು ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ ಹೇಳಿದ್ದಾರೆ.

ಈ ಹಿಂದೆ ಕಳುಹಿಸಿದ್ದ ಮಸೂದೆಯನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದ ರಾಜ್ಯಪಾಲ ಆರ್‌. ಎನ್‌. ರವಿ ಅವರ ನಡೆಗೆ ವಿರೋಧ ವ್ಯಕ್ತಪಡಿಸಿದ ಹಲವು ಶಾಸಕರು ರಾಜ್ಯಪಾಲರ ನಡೆಯನ್ನು ಖಂಡಿಸಿದ್ದಾರೆ.

ತಮಿಳುನಾಡು ಆನ್‌ಲೈನ್ ಜೂಜಿನ ನಿಷೇಧ ಮತ್ತು ಆನ್‌ಲೈನ್ ಆಟಗಳ ನಿಯಂತ್ರಣ ಮಸೂದೆ, 2022 ಅನ್ನು ವಿಧಾನಸಭೆಯಲ್ಲಿ ಮತ್ತೊಮ್ಮೆ ಪರಿಚಯಿಸಿದ ಸ್ಟಾಲಿನ್, ನ್ಯಾಯಮೂರ್ತಿ (ನಿವೃತ್ತ) ಕೆ ಚಂದ್ರು ನೇತೃತ್ವದ ಸಮಿತಿಯು ನೀಡಿದ ಸಲಹೆಗಳು ಮತ್ತು ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗಿನ ಸಮಾಲೋಚನೆಯ ಬಳಿಕ ಸರ್ಕಾರವು ಶಾಸನವನ್ನು ರೂಪಿಸಿದೆ ಎಂದು ತಿಳಿಸಿದರು.

ಹೆಚ್ಚಿನ ಸುದ್ದಿ