ಬೆಂಗಳೂರು: ಸೋಮವಾರ ಸಂಜೆ ಬಿಡುಗಡೆಯಾದ ಬಿಜೆಪಿ ಮೂರನೇ ಪಟ್ಟಿಯಲ್ಲಿ ಗೋವಿಂದರಾಜನಗರ ಕ್ಷೇತ್ರದಿಂದ ಮಾಜಿ ಕಾರ್ಪೋರೇಟರ್ ಉಮೇಶ್ ಶೆಟ್ಟಿಗೆ ಅವಕಾಶ ನೀಡಲಾಗಿದೆ. ತಮ್ಮ ಮಗ ಅರುಣ್ ಗೆ ಟಿಕೆಟ್ ಕೊಡಿಸುವ ಆಕಾಂಕ್ಷೆ ಹೊಂದಿದ್ದ ಸಚಿವ ವಿ.ಸೋಮಣ್ಣ ಅವರಿಗೆ ಬೆಂಗಳೂರಿನ ಮೇಲೆ ಈಗ ಸಂಪೂರ್ಣ ಹಿಡಿತ ತಪ್ಪಿದಂತಾಗಿದೆ.
ಬಿಜೆಪಿ ಮೊದಲ ಪಟ್ಟಿಯಲ್ಲೇ ಸೋಮಣ್ಣ ಅವರಿಗೆ ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿತ್ತು. ರಾಜ್ಯಾದ್ಯಂತ ಆರ್.ಅಶೋಕ್ ಮತ್ತು ವಿ.ಸೋಮಣ್ಣ ಹೊರತು ಪಡಿಸಿ ಯಾರಿಗೂ ಎರಡು ಕ್ಷೇತ್ರಗಳನ್ನು ನೀಡಿರಲಿಲ್ಲ. ಗೋವಿಂದರಾಜನಗರದಲ್ಲಿ ವಿ.ಸೋಮಣ್ಣ ಪುತ್ರನಿಗೆ ಟಿಕೆಟ್ ಸಿಗಬಹುದೆಂದು ನಿರೀಕ್ಷಿಸಲಾಗಿತ್ತಾದರೂ ಉಮೇಶ್ ಶೆಟ್ಟಿ, ಶಾಂತಕುಮಾರಿ ಮುಂತಾದವರ ಹೆಸರೂ ಸಹ ಮುಂಚೂಣಿಯಲ್ಲಿ ಕೇಳಿಬಂದಿತ್ತು. ಈಗ ಉಮೇಶ್ ಶೆಟ್ಟಿಗೆ ಅವಕಾಶ ನೀಡುವ ಮೂಲಕ ವಿ.ಸೋಮಣ್ಣನವರನ್ನು ರಾಜಧಾನಿ ರಾಜಕೀಯದಿಂದ ದೂರವಿಡಲಾಗಿದೆ.