Monday, July 7, 2025
Homeಜಿಲ್ಲಾ ಸುದ್ದಿಗಳುನನ್ನ ತಂದೆಯೇ ನನ್ನನ್ನು ʻಪೋರ್ನ್‌ ಸ್ಟಾರ್‌ʼ ಅಂದುಬಿಟ್ರು – ಉರ್ಫಿ ಜಾವೇದ್ ಅಳಲು

ನನ್ನ ತಂದೆಯೇ ನನ್ನನ್ನು ʻಪೋರ್ನ್‌ ಸ್ಟಾರ್‌ʼ ಅಂದುಬಿಟ್ರು – ಉರ್ಫಿ ಜಾವೇದ್ ಅಳಲು

ಮುಂಬೈ: ವಿಭಿನ್ನ ಬಟ್ಟೆ ತೊಟ್ಟು ಫೇಮಸ್‌ ಆಗಿರುವ ಉರ್ಫಿ ಜಾವೇದ್‌ ತಮ್ಮ ಬಾಲ್ಯದ ಕರಾಳ ನೆನಪುಗಳನ್ನ ಬಿಚ್ಚಿಟ್ಟಿದ್ದಾರೆ.

ʻನಾನು 15 ವರ್ಷದವಳಿದ್ದಾಗ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ಸಾಧಾರಣ ಫೋಟೋವೊಂದನ್ನ ಅಪ್ಲೋಡ್‌ ಮಾಡಿದ್ದೆ, ಯಾರೋ ಅದನ್ನ ಡೌನ್‌ಲೋಡ್‌ ಮಾಡಿಕೊಂಡು ಪೋರ್ನ್‌ ವೆಬ್‌ಸೈಟ್‌ನಲ್ಲಿ ಹಾಕಿದ್ದರು. ಈ ವಿಷಯ ನಿಧಾನವಾಗಿ ಎಲ್ಲಕಡೆ ಹರಡಿತ್ತು. ಇದರಿಂದ ಎಲ್ಲರೂ ನನ್ನನ್ನ ಪೋರ್ನ್‌ ಸ್ಟಾರ್‌ ಎಂದು ಕರೆಯಲು ಶುರು ಮಾಡಿದ್ದರು. ಈ ಬಗ್ಗೆ ನಾನು ನನ್ನ ತಂದೆಯೊಂದಿಗೆ ಹೇಳಿಕೊಂಡರೂ ಅವರು ನಂಬಲು ತಯಾರಿರಲಿಲ್ಲ. ಮೊದಲೇ ಬಾಯಿಗೆ ಬಂದಂತೆ ನಿಂದಿಸುತ್ತಿದ್ದ ಅವರು, ಕೊನೆಗೆ ನನ್ನನ್ನ ʻಇವಳು ಪೋರ್ನ್‌ ಸ್ಟಾರ್‌ʼ ಎಂದೂ ಕರೆದುಬಿಟ್ಟರು. ಅವರಿಂದ ಹಿಂಸೆ ತಾಳಲಾರದೇ ನನ್ನ 17ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋದೆʼ. ಎಂದು ಖಾಸಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಳಲು ತೋಡಿಕೊಂಡಿದ್ದಾರೆ

ಹೆಚ್ಚಿನ ಸುದ್ದಿ