ವಿಧಾನಸಭೆಗೆ ಇದೇ ನನ್ನ ಕೊನೆಯ ಚುನಾವಣೆ ಎಂದು ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಚಾಮರಾಜನಗರದಲ್ಲಿಂದು ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ 10 ನೇ ಬಾರಿಗೆ ಕಣಕ್ಕಿಳಿಯುತ್ತಿದ್ದೇನೆ. 3 ಬಾರಿ ಗೆಲವು ಕಂಡು 6 ಬಾರಿ ಸೋಲು ಕಂಡಿದ್ದೇನೆ.
ಕಳೆದ ಮೂರು ಬಾರಿಯಿಂದ ಸತತವಾಗಿ ಸೋತಿದ್ದರೂ
ಚಾಮರಾಜನಗರವನ್ನು ಜಿಲ್ಲೆ ಮಾಡಿರುವ ಹಮ್ಮೆಯಿದೆ. ಜಿಲ್ಲೆಗೆ ಕಾವೇರಿ ಕುಡಿಯುವ ನೀರು ತಂದಿದ್ದೇನೆ, ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಇಷ್ಟೆಲ್ಲಾ ಮಾಡಿದರೂ ನನ್ನನ್ನು ಚಾಮರಾಜನಗರ ಜನತೆ ಕೈ ಹಿಡಿಯದ ಮೇಲೆ ಚುನಾವಣೆಗೆ ಏಕೆ ನಿಲ್ಲಬೇಕು ಎಂದು ಬೇಸರ ವ್ಯಕ್ತಪಡಿಸಿದರು.