Monday, March 2, 2026
Homeಚುನಾವಣೆ 2023ಟಾಂಗಾ ಏರಿ ಮತದಾನ ಜಾಗೃತಿ ಮೂಡಿಸಿದ ಡಿಸಿ

ಟಾಂಗಾ ಏರಿ ಮತದಾನ ಜಾಗೃತಿ ಮೂಡಿಸಿದ ಡಿಸಿ

ವಿಜಯಪುರ : ಸಾರ್ವತ್ರಿಕ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿನೂತನವಾಗಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.

ಐತಿಹಾಸಿಕ ವಿಜಯಪುರ ನಗರದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಸ್ವತ: ಟಾಂಗಾದಲ್ಲಿ ಸಂಚರಿಸುವ ಮೂಲಕ ನಗರದ ಮತದಾರರ ಗಮನ ಸೆಳೆದರು. ನಗರದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ನಗರದ ಪಾರಂಪರಿಕ ವಾಹನವಾದ ಟಾಂಗಾದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರೊಂದಿಗೆ ನಗರದ ಬಸವೇಶ್ವರ ವೃತ್ತ, ಗಾಂಧಿ ಚೌಕ್, ಸರಾಫ್ ಬಜಾರ್ ಏರಿಯಾಗಳಲ್ಲಿ ಮತದಾನದ ಮಹತ್ವ ದ ಕುರಿತು ಜಾಗೃತಿ ನಡೆಸಿದರು.

ಜಾಥಾದಲ್ಲಿ ಪಾಲ್ಗೊಂಡಿದ್ದ ಕಲಾ ತಂಡಗಳು ವಿಶೇಷ ಮೆರಗು ನೀಡಿದ್ದಲ್ಲದೇ ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಿಸಿ, ಐತಿಹಾಸಿಕ ನೆನಪುಗಳಿಗೆ ಮತ್ತೆ ಜೀವ ನೀಡಿದಂತಾಯಿತು. ಮತದಾನ ಜಾಗೃತಿ ಟಾಂಗಾ ಜಾಥಾದಲ್ಲಿ 32ಕ್ಕೂ ಹೆಚ್ಚು ಟಾಂಗಾಗಳು ಭಾಗವಹಿಸಿದ್ದವು. ಜಾಥಾದಲ್ಲಿ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಟಾಂಗಾದಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.

ಹೆಚ್ಚಿನ ಸುದ್ದಿ