Wednesday, October 8, 2025
Homeಚುನಾವಣೆ 2023ಕಾಂಗ್ರೆಸ್‌ 2 ನೇ ಪಟ್ಟಿ: ಧಾರವಾಡದಿಂದ ವಿನಯ್‌ ಕುಲಕರ್ಣಿ ಕಣಕ್ಕೆ

ಕಾಂಗ್ರೆಸ್‌ 2 ನೇ ಪಟ್ಟಿ: ಧಾರವಾಡದಿಂದ ವಿನಯ್‌ ಕುಲಕರ್ಣಿ ಕಣಕ್ಕೆ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಪ್ರಕಟಿಸಿದ್ದೆ. ಧಾರವಾಡ ಕ್ಷೇತ್ರದಿಂದ ಪ್ರಭಾವಿ ಲಿಂಗಾಯತ ಮುಖಂಡ, ಮಾಜಿ ಶಾಸಕ ವಿನಯ್‌ ಕುಲಕರ್ಣಿ ಕಾಂಗ್ರೆಸ್‌ ಪರವಾಗಿ ಸ್ಪರ್ಧಿಸಲಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೆಚ್ಚಿನ ಶಿಷ್ಯರಾಗಿರುವ ವಿನಯ್‌ ಕುಲಕರ್ಣಿ ಹಾವೇರಿಯ ಶಿಗ್ಗಾಂವ್‌ ನಲ್ಲಿ ಸಿಎಂ ಬೊಮ್ಮಾಯಿ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿತ್ತು, ಆದರೆ, ಧಾರವಾಡ ಕ್ಷೇತ್ರದಿಂದ ಕಾಂಗ್ರೆಸ್‌ ಅವರಿಗೆ ಟಿಕೆಟ್‌ ಅಂತಿಮ ಗೊಳಿಸಿದೆ.

 ವಿನಯ್ ಕುಲಕರ್ಣಿ ಲಿಂಗಾಯತ ಸಮುದಾಯದ ಪಂಚಮಸಾಲಿಗೆ ಸೇರಿದವರಾಗಿದ್ದು, ಈ ಬಾರಿ ಧಾರವಾಡದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಹೆಚ್ಚಿನ ಸುದ್ದಿ