Monday, March 2, 2026
Homeಚುನಾವಣೆ 2023ಡಿಕೆಶಿ ಮನೆ ಮುಂದೆ ವಿನಯ್ ಕುಲಕರ್ಣಿ ಬೆಂಬಲಿಗರ ಧರಣಿ

ಡಿಕೆಶಿ ಮನೆ ಮುಂದೆ ವಿನಯ್ ಕುಲಕರ್ಣಿ ಬೆಂಬಲಿಗರ ಧರಣಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದೆ.‌ ಇದೀಗ ಶಿಗ್ಗಾಂವ್ ಟಿಕೆಟ್ ನೀಡುವಂತೆ ವಿನಯ್ ಕುಲಕರ್ಣಿ ಬೆಂಬಲಿಗರು ಡಿ.ಕೆ.ಶಿವಕುಮಾರ್ ಮನೆ ಮುಂದೆ ಧರಣಿ ನಡೆಸಿದ್ದಾರೆ.

ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್‌ 166 ಕ್ಷೇತ್ರಗಳಲ್ಲಿ ತನ್ನ ಹುರಿಯಾಳುಗಳನ್ನು ಅಂತಿಮಗೊಳಿಸಿದೆ. ಮೂರನೇ ಪಟ್ಟಿ ಬಾಕಿ ಇದ್ದು, ಶಿಗ್ಗಾಂವಿ ಕ್ಷೇತ್ರದಿಂದ ವಿನಯ್ ಕುಲಕರ್ಣಿ ‌ಗೆ ಟಿಕೆಟ್ ನೀಡುವಂತೆ, ವಿನಯ್ ಬೆಂಬಲಿಗರು ಧರಣಿ ನಡೆಸಿದ್ದಾರೆ. ಈಗಾಗಲೇ ಧಾರವಾಡ ಕ್ಷೇತ್ರದಿಂದ ವಿನಯ್‌ ಕಣಕ್ಕಿಳಿಯುತ್ತಿದ್ದು ಕಾಂಗ್ರೆಸ್ ಬಿ ಫಾರಂ ಕೂಡಾ ನೀಡಿದೆ. ಆದರೆ ಸಿಎಂ ಬೊಮ್ಮಾಯಿ ವಿರುದ್ಧ ವಿನಯ್‌ ಕುಲಕರ್ಣಿ ಕಣಕ್ಕಿಳಿಯಬೇಕು ಎಂದುಬು ಬೆಂಬಲಿಗರ ಒತ್ತಾಯವಾಗಿದೆ.

ಹೆಚ್ಚಿನ ಸುದ್ದಿ