ಬೆಳಗಾವಿ: ಜಗದೀಶ್ ಶೆಟ್ಟರ್ ಹಾಗೂ ತಾನು ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ ಕುರಿತು ʼನಾವು ತವರು ಮನೆ ಬಿಟ್ಟು ಗಂಡನ ಮನೆಗೆ ಬಂದಿದ್ದೇವೆ” ಎಂದು ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ.
“ಜಗದೀಶ್ ಶೆಟ್ಟರ್ ಮನೆತನ ಜನಸಂಘದಿಂದ ಬಿಜೆಪಿಯವರೆಗೆ ಕೆಲಸ ಮಾಡಿದ ಮನೆತನ. ಸಂಪೂರ್ಣವಾಗಿ ಸಂಘಪರಿವಾರ, ಬಿಜೆಪಿಯಲ್ಲಿ ಪಕ್ಷ ಕಟ್ಟಿ ಬೆಳೆಸಲು ಅವರು ಸೇವೆ ನೀಡಿದ್ದಾರೆ. ಮನೆ ಬಿಟ್ಟು ಹೋಗುವಾಗ ಭಾವುಕರಾಗೋದು ಸಹಜ” ಎಂದು ಸವದಿ ಹೇಳಿದ್ದಾರೆ.
ʼಓರ್ವ ಹೆಣ್ಣು ಮಗಳನ್ನು 20 ರಿಂದ 25 ವರ್ಷ ತಂದೆ ತಾಯಿ ಬೆಳೆಸಿರುತ್ತಾರೆ. ಮದುವೆ ಆದ ಬಳಿಕ ಗಂಡನ ಮನೆಗೆ ಹೋಗುವಾಗ ಆ ಮನೆ ಹೇಗಿರುತ್ತೋ ಎಂಬ ಆತಂಕ, ಈ ಮನೆ ಬಿಟ್ಟು ಹೋಗುವ ದುಃಖ ಆಗುತ್ತದೆ. ನಾವು ಇವತ್ತು ತವರು ಮನೆ ಬಿಟ್ಟು ಗಂಡನ ಮನೆಗೆ ಬಂದಿದ್ದೇವೆ. ಗಂಡನ ಮನೆಯವರು ಪ್ರೀತಿಯಿಂದ ಕಾಣುತ್ತಿದ್ದಾರೆ ಅಪ್ಪಿಕೊಂಡಿದ್ದಾರೆ. ಇನ್ಮುಂದೆ ಇದೇ ನಮ್ಮ ಮನೆ ಅಂತಾ ಮುಂದುವರಿಯುತ್ತೇನೆ” ಎಂದು ಸವದಿ ಹೇಳಿದ್ದಾರೆ.