Tuesday, October 7, 2025
Homeಚುನಾವಣೆ 2023ಮಿಲ್ಟ್ರಿ ಹೋಟೆಲ್ ಊಟಾನೂ ಮಾಡ್ತೀವಿ ಚುನಾವಣೆನೂ ಗೆಲ್ತೀವಿ: ಅಶ್ವಥ್‌ ನಾರಾಯಣ್‌

ಮಿಲ್ಟ್ರಿ ಹೋಟೆಲ್ ಊಟಾನೂ ಮಾಡ್ತೀವಿ ಚುನಾವಣೆನೂ ಗೆಲ್ತೀವಿ: ಅಶ್ವಥ್‌ ನಾರಾಯಣ್‌

ರಾಮನಗರ: ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ವಿರುದ್ಧ ಬಿಜೆಪಿಯ ಆರ್‌ ಅಶೋಕ್‌ ಕಣಕ್ಕಿಳಿದಿದ್ದಾರೆ. ಈ ಕುರಿತು ಮಾತನಾಡಿದ್ದ ಡಿ.ಕೆ ಶಿವಕುಮಾರ್ ಅಶೋಕ್‌ ಕನಕಪುರದಲ್ಲಿ ಒಳ್ಳೆಯ ಮಿಲ್ಟ್ರಿ ಹೊಟೇಲ್‌ಗಳಿವೆ.. ಬಂದು ಊಟ ಮಾಡಿ ಹೋಗಲಿ ಎಂದಿದ್ದರು.

ಡಿ.ಕಡ ಶಿವಕುಮಾರ್‌ ಮಾತಿಗೆ ಪ್ರತಿಕ್ರಿಯೆ ನೀಡಿದ ಸಚಿವ ಅಶ್ವತ್ಥನಾರಾಯಣ್ ಡಿ.ಕೆ ಶಿವಕುಮಾರ್‌ರವರ ಆತಿಥ್ಯ ಸ್ವೀಕರಿಸ್ತೀವಿ, ಮಿಲ್ಟ್ರಿ ಹೋಟೆಲ್‌ ಊಟಾನೂ ಮಾಡ್ತೀವಿ, ವೋಟನ್ನೂ ಪಡೆದು ಚುನಾವಣೆ ಗೆಲ್ತೀವಿ ಎಂದು ತಿರುಗೇಟು ನೀಡಿದ್ದಾರೆ.

ಕನಕಪುರದಿಂದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಸ್ಪರ್ಧೆ ಕುರಿತು ಮಾತನಾಡಿ, ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ವಿರುದ್ಧದ ಅಲೆ ಇದೆ. ಜನರಿಗೆ ಸಂಪೂರ್ಣ ಅತೃಪ್ತಿ ಇದೆ. ಅಲ್ಲಿ ಬಿಜೆಪಿ ಗೆಲ್ಲುವ  ವಿಶ್ವಾಸ ನಮಗಿದೆ. ಹಾಗಾಗಿ ನಮ್ಮ ಪಕ್ಷದ ಹಿರಿಯ ನಾಯಕ ಆರ್.ಅಶೋಕ್ ಅವರನ್ನ ಕಣಕ್ಕಿಳಿಸಿದ್ದೇವೆ ಎಂದಿದ್ದಾರೆ . ಗೆಲುವು ಸಾಧಿಸಿ ತೋರಿಸ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿ