Monday, March 2, 2026
Homeಚುನಾವಣೆ 2023ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ!

ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ!

ಚುನಾವಣೆಗೆ ಸ್ಪರ್ಧಿಸಲು ಲಕ್ಷ ಲಕ್ಷ ಹಣಗಳನ್ನು‌ ಸುರಿದ್ರೆ ಯಾದಗಿರಿಯಲ್ಲೊಬ್ಬ ಅಭ್ಯರ್ಥಿ ಮನೆ ಮನೆಗೆ ತೆರಳಿ ಬಿಕ್ಷೆ ಬೇಡಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ.ಬಿಕ್ಷೆ ಬೇಡಿ ಹಣ ಕೂಡಿ ಚುನಾವಣೆಗೆ ಸ್ಪರ್ಧಿಸುವಂಥದ್ದೇನಿದೆ ಅನ್ನೋ ಪ್ರಶ್ನೆ ನಿಮ್ಗೆ ಮೂಡಿರಬಹುದು. ಈತನ ಚಿಂತನೆ ಕೇಳಿದ್ರೆ ನಿಜಕ್ಕೂ ಅಚ್ಚರಿಗೊಳ್ತೀರ.

ಸಮಾಜದಲ್ಲಿ ಸಮಾರಸ್ಯ ನಿರ್ಮಾಣಕ್ಕಾಗಿ ರಾಜಕೀಯ ಪ್ರವೇಶ ಮಾಡಿದ್ದೇನೆ. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನರಿಗೆ ಮುಟ್ಟಿಸಲು ಪ್ರತಿ ಹಳ್ಳಿ ಹಳ್ಳಿಗಳಿಗೆ ಸಂಚರಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇನೆ. ಪ್ರತಿ ಹಳ್ಳಿಯ ಮಕ್ಕಳಿಗೆ ಶಿಕ್ಷಣಕ್ಕಾಗಿ ನಮ್ಮ ಸಂವಿಧಾನ, ಯುವ ಜನರ ಸೇವೆಗಾಗಿ ಅಂಬೇಡ್ಕರ್ ಮತ್ತು ವಿವೇಕಾನಂದರ ಹೆಸರಲ್ಲಿ ನನ್ನ ಒಂದು ಎಕರೆ ಜಮೀನನ್ನು ದೇಣಿಗೆ ನೀಡುತ್ತಿದ್ದೇನೆ ಎಂದು ಪಕ್ಷೇತರ ಘೋಷಿತ ಅಭ್ಯರ್ಥಿ ದೇವಿಂದ್ರಪ್ಪ ರಾಮಸಮುದ್ರ ಅವರು ಮಾಧ್ಯಮಗಳಿಗೆ ತಿಳಿಸಿದರು.
ದೇವೀಂದ್ರಪ್ಪ ಈ ರೀತಿ ಭಿಕ್ಷೆ ಬೇಡಿದ ಹಣದಿಂದ ನಾಮಪತ್ರ ಸಲ್ಲಿಸಿದ್ದಾರೆ. ಯಾದಗಿರಿ ತಹಶೀಲ್ದಾರ್​ ಕಚೇರಿಗೆ ತೆರಳಿದ ಅವರು 10 ಸಾವಿರ ನಾಣ್ಯಗಳನ್ನು ನೀಡಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಸಾರ್ವಜನಿಕರಿಂದಲೇ ಹಣ ಸಂಗ್ರಹ ಮಾಡಿದ್ದಾರೆ. ರಥಯಾತ್ರೆ ನಡೆಸಿ ಒಂದು ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ.

ಹೆಚ್ಚಿನ ಸುದ್ದಿ