Monday, March 2, 2026
Homeಚುನಾವಣೆ 2023ಬ್ರಾಹ್ಮಣರಲ್ಲ, ಲಿಂಗಾಯಿತರೇ ಮುಂದಿನ ಸಿಎಂ - ಯತ್ನಾಳ್ ಬಾಂಬ್!

ಬ್ರಾಹ್ಮಣರಲ್ಲ, ಲಿಂಗಾಯಿತರೇ ಮುಂದಿನ ಸಿಎಂ – ಯತ್ನಾಳ್ ಬಾಂಬ್!

ಧಾರವಾಡ: ಮುಂದಿನ ಸಿಎಂ ಕೂಡ ಲಿಂಗಾಯಿತರೇ ಆಗಲಿದ್ದಾರೆ ಎನ್ನುವ ಮೂಲಕ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಜಗದೀಶ್ ಶೆಟ್ಟರ್ ಪಕ್ಷ ತ್ಯಾಗದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಬಿಜೆಪಿ ಬಹುಮತ ಗಳಿಸುವುದು ಖಂಡಿತ. ಬಿ.ಎಲ್.ಸಂತೋಷ್, ಪ್ರಲ್ಹಾದ್ ಜೋಷಿ ಯಾರೂ ಸಿಎಂ ಆಗುವುದಿಲ್ಲ ಎಂದು ಹೇಳಿದ್ದಾರೆ.


ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ ಬಗ್ಗೆ ಪ್ರತಿಕ್ರಿಯಿಸುತ್ತಾ , ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ ಬಗ್ಗೆ ಪ್ರತಿಕ್ರಿಯಿಸುತ್ತಾ, ೨೦೪೭ ರಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಬೇಕೆಂದು ಘೋಷಿಸಿರುವ ಎಸ್‌ಡಿಪಿಐ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಜಗದೀಶ್ ಶೆಟ್ಟರ್ ಸೇರಿದ್ದಾರೆ. ಅವರಿಗೆ ಯಾವುದೇ ಸಿದ್ದಾಂತ, ತತ್ವ ಇಲ್ಲ ಎಂದು ಟೀಕಿಸಿದರು. ಜೊತೆಗೆ ಅವರೆಲ್ಲಾ ಎಂ.ಬಿ.ಪಾಟೀಲ್ ಮತ್ತು ಶಾಮನೂರು ಶಿವಶಂಕರಪ್ಪ ಸಂಬಂಧಿಕರೇ ಆಗಿದ್ದಾರೆ. ಇಷ್ಟುದಿನ ಬೀಗರು ಬೇರೆ ಬೇರೆ ಪಕ್ಷದಲ್ಲಿದ್ದರು. ಈಗ ಒಂದೇ ಕಡೆ ಸೇರಿದ್ದಾರೆ ಎಂದು ಲೇವಡಿ ಮಾಡಿದರು.


ಜಗದೀಶ್ ಶೆಟ್ಟರ್ ಅವರು ದುಡಿಯಲಾರದೆ ದುಃಖ ಪಡಲಾರದೆ ಸುಖ ಉಂಡಿದ್ದಾರೆ. ಶಾಸಕ, ಸಚಿವ, ಸಭಾಪತಿ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಿದ್ದವರು ಇವತ್ತು ಅನ್ಯಾಯ ಆಗಿದೆ ಅನ್ಯಾಯ ಆಗಿದೆ ಎನ್ನುತ್ತಿದ್ದಾರೆ. ಬಿಜೆಪಿಯಲ್ಲಿ ಎರಡನೇ ಸಾಲಿನ ನಾಯಕತ್ವ ಬರಲಿದ್ದು, ಸಾಕಷ್ಟು ಲಿಂಗಾಯಿತ ನಾಯಕರು ಮುನ್ನೆಲೆಗೆ ಬರಲಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.


ಮುಂದೆ ಎಲ್ಲವೂ ನಮ್ಮ ಕೈಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ ಯತ್ನಾಳ್, ಕರ್ನಾಟಕದಲ್ಲಿ ಬಿಜೆಪಿಯವರೇ ಮುಖ್ಯಮಂತ್ರಿಯಾಗುವುದು ಖಂಡಿತ ಎಂದರು.

ಹೆಚ್ಚಿನ ಸುದ್ದಿ