Monday, March 2, 2026
Homeಜಿಲ್ಲಾ ಸುದ್ದಿಗಳುಜನ ಸಂಚಾರಕ್ಕೆ ಅಡ್ಡಿಯಾದ ಮಳೆಯ ನೀರು ಹಗಲು ಹೊತ್ತಿನಲ್ಲಿ ಮಾಯವಾದ ರಸ್ತೆ. ರಸ್ತೆಯನ್ನು ನುಂಗಿದ...

ಜನ ಸಂಚಾರಕ್ಕೆ ಅಡ್ಡಿಯಾದ ಮಳೆಯ ನೀರು ಹಗಲು ಹೊತ್ತಿನಲ್ಲಿ ಮಾಯವಾದ ರಸ್ತೆ. ರಸ್ತೆಯನ್ನು ನುಂಗಿದ ಮಳೆ ಹಾಗೂ ಚರಂಡಿ ನೀರು

ಜು 21 : ಗಜೇಂದ್ರಗಡ ನಗರ ಸೇರಿದಂತೆ ವಿವಿಧೆಡೆ ಬುಧವಾರ ಸಂಜೆ ಸುರಿದ ಮಳೆಯಿಂದ ತಾಲ್ಲೂಕಿನ ಹೀರೆ ಅಳಗುಂಡಿ ಗ್ರಾಮದ ಅಂಬೇಡ್ಕರ್ ಕಾಲೋನಿಯ ರಸ್ತೆ ತುಂಬೆಲ್ಲಾ ನೀರು ನಿಂತು ರಸ್ತೆಯಾವುದು ಎಂದು ಜನ ಪ್ರಶ್ನಿಸುವಂತಾಗಿದೆ . ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಪ್ರಿತಿ ದಿನ ಸಂಜೆ ವೇಳೆ ಸುರಿಯುವ ಮಳೆಯು ತಂಪಾಗಿಸಿತು.ಸಂಜೆ ವೇಳೆ 4 ಗಂಟೆಗೆ ಶುರುವಾದ ಮಳೆಯು ಬಿಟ್ಟು ಬಿಡದೆ ಧಾರಕಾರವಾಗಿ ಸುರಿಯಿತು. ಪರಿಣಾಮ ಹೀರೆ ಅಳಗುಂಡಿ ಗ್ರಾಮದ ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆಗಳಲ್ಲಿ ನೀರು ಹರಿಯಲಾರಂಭಿಸಿತು. ಚರಂಡಿಗಳು, ನಾಲೆಗಳು, ತಗ್ಗು, ದಿನ್ನೆಯ ಪ್ರದೇಶಗಳಲ್ಲಿ ನೀರು ಸಂಗ್ರಹವಾಯಿತು.ಹವಾಮಾನದಲ್ಲಿನ ದಿಢೀರ್‌ ಬದಲಾವಣೆಯಿಂದ ಸುರಿದ ಮಳೆಗೆ ಜನತೆ ಮೈ ಒಡ್ಡಿದರು. ಖುಷಿಯಿಂದಲೇ ನೀರಲ್ಲಿ ಜನ ಸಂಚಾರ ಕಂಡು ಬಂದಿತು. ಮಕ್ಕಳು, ಯುವತಿಯರು ಕೆಲವರು ಮಳೆಯಿಂದ ರಕ್ಷಿಸಿಕೊಳ್ಳಲು ಕೊಡೆಯ ಮೊರೆ ಹೋದರೆ, ಇನ್ನು ಹಲವರು ಒದ್ದೆಯಾದರು.ಗ್ರಾಮದ ರಾಜಕುಮಾರ ಕೋಣನವರ ಮನೆ ಅಂಬೇಡ್ಕರ್‌ ಕಾಲೋನಿ. ಪ್ರಾಥಮಿಕ ಶಾಲೆಯ ರಸ್ತೆ ವಿವಿಧೆಡೆ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ. ಸಂಜೆಯಾದರೆ ಮತ್ತೆ ಮಳೆ ಸುರಿಯುತ್ತದೆ ಮೋಡ ಮುಸುಕಿದ ವಾತಾವರಣ ಇದೆ. ಹೀಗಾಗಿ ರಾತ್ರಿಯೂ ಮಳೆ ಸುರಿಯುವ ಲಕ್ಷಣಗಳಿವೆ ಎನ್ನುತ್ತಾರೆ ಗ್ರಾಮದ ಬಿಜೆಪಿಯ ಪಕ್ಷದ ಎಸ್ಟಿ ಮೋರ್ಚಾ ಉಪಾಧ್ಯಕ್ಷ ರಾಜಕುಮಾರ ಕೋಣನವರ ಮಾತನಾಡಿ ಬಿಟ್ಟಿ ಭಾಗ್ಯ ಕೊಡುವದು ಬಿಟ್ಟು ಗ್ರಾಮ ಅಭಿವೃದ್ಧಿಯ ಮಾಡಬೇಕು ನಮ್ಮ ಗ್ರಾಮ ಅಷ್ಟೆ ಅಲ್ಲ ಇಡಿ ತಾಲ್ಲೂಕಿನಲ್ಲಿ ಇದೆ ಪರಸ್ಥಿ ನಿರ್ಮಾಣ ಆಗಿದೆ ನಮ್ಮ ತಾಲ್ಲೂಕಿನ ಶಾಸಕರು ಕಾಣೆಯಾಗಿರುವ ಲಕ್ಷಣ ಕಾಣಿಸುತ್ತದ್ದೆ ತಾಲ್ಲೂಕಿಗೆ ಅಷ್ಟ ಕೋಟಿಯ ತಂದಿವಿ ಇಷ್ಟ ಕೋಟಿ ಅನುದಾನ ಬಂದಿದೆ ಅಂತ ಹೇಳಿವರು ಹೋರತು ಅಭಿವೃದ್ಧಿಯ ಶ್ಯೂನ್ಯ ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವರದಿ: ಯಮನೂರಪ್ಪ ಆರ್ ಅಬ್ಬಿಗೇರಿ

ಹೆಚ್ಚಿನ ಸುದ್ದಿ