ಯಾದಗಿರಿ :: ಈ ಸಮಾಜದಲ್ಲಿ ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ. ಹೆಣ್ಣು ಮಕ್ಕಳನ್ನ ಅಪಾರಣ ಅತ್ಯಾಚಾರ ಕಿರುಕುಳಕೊಡುವುದು ಇವುಗಳ ಅಂತ್ಯವೇ ಇಲ್ಲವೇ? ಹೆಣ್ಣು ಎಂದರೆ ಜೀವ ಅಲ್ಲವೇ ಅಥವಾ ಅವಳು ಮನುಷ್ಯಳೆ ಅಲ್ಲವೇ? ಇಲ್ಲ ಎಲ್ಲವನ್ನು ಸಹಿಸುವ ಯಂತ್ರವೇ ಯಾವುದಕ್ಕೂ ಉತ್ತರವೇ ಸಿಗುತ್ತಿಲ್ಲ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಕಡಿಮೆಯಾಗುತ್ತಿಲ್ಲ ಎಂದು ಸಮಾಜ ಸೇವಕಿ ಶ್ರೀಮತಿ.ರೂಪಾ. ಜಿ. ಭಜಂತ್ರಿ ವಿಷಾದ ವ್ಯಕ್ತಪಡಿಸಿದ್ದಾರೆ
ಅನ್ಯಾಯಕ್ಕೆ ನ್ಯಾಯ ಕೊಡಿಸಿದಾಗ ಮಾತ್ರ ಅದಕ್ಕೊಂದು ಬೆಲೆ ಬರುವುದು. ಒಂದು ಮಗಳ ಬಗ್ಗೆ ಏನೆಲ್ಲಾ ಭವಿಷ್ಯ ಕಟ್ಟಿಕೊಂಡ ಹೆತ್ತವರ ಗತಿ ಏನು? ಏನು ಅರಿಯದ ಕಂದಮ್ಮನ ಅತ್ಯಾಚಾರವಾದಗ ಆ ತರ ಯಾತನೆ ಯಾರಿಗೆ ಹೇಳಬೇಕು. ದೇವರು ಕೂಡ ಎಷ್ಟು ಕ್ರೂರಿ ಆಗಿ ಮೂಕನಾಗಿ ಕೋತು ಬಿಟ್ಟ.ಅತ್ಯಾಚಾರ ಮಾಡಿದ ಪಾಪಿಗಳಿಗೆ ಕ್ಷಮೆ ನೀಡಬಾರದು . ಅದೇ ಕ್ಷಮೆಯಿಂದ ಇನ್ನೂ ಸಾವಿರಾರು ಅತ್ಯಾಚಾರಗಳು ನಡೆಯುತ್ತಿವೆ.
ಶಾಲೆಗೆ ಹೋದ ಮಗು ಮರಳಿ ಮನೆಗೆ ಬರುತ್ತಿಲ್ಲ. ಕಾಲೇಜ್ಗೆ ಹೋದ ಮಗಳು ಮರಳಿ ಹಾಸ್ಟೆಲ್ ಸೇರುತ್ತಿಲ್ಲ, ದುಡಿಯೋಕೆ ಹೋದ ಮಹಿಳೆ ಮರಳಿ ಕುಟುಂಬ ಸೇರುತ್ತಿಲ್ಲ. ಇನ್ನು ಹೆಣ್ಣು ಈ ಹಾಳಾದ ಸಮಾಜದಲ್ಲಿ ಎಷ್ಟು ಭಯಪಟ್ಟು ಸಾಯಬೇಕು ಇನ್ನೆಷ್ಟು ಭಯದಿಂದ ಬದುಕಬೇಕು ಹೆಣ್ಣಿಗೆ ಇನ್ನೂ ಸ್ವತಂತ್ರವೇ ಇಲ್ಲ ಎಂದರೆ ಇದು ಎಂಥಾ ಸಮಾಜ.
ಹೆಣ್ಣು ಒಂದು ಹೊಟ್ಟೆಯಲ್ಲಿ ಮೂಡುವಾಗ ಹಿಡಿದು ಬೆಳೆದು ದೊಡ್ಡವಳಾದರು ಅವಳಿಗೆ ಹಿಂಸೆ ಮಾಡಿ ಸಾಯಿಸೋದು ಮಾತ್ರ ತಪ್ಪಿಲ್ಲ. ಅತ್ಯಾಚಾರ ಮಾಡುವ ನೀಚರೆ ಆ ಜಾಗದಲ್ಲಿ ನಿಮ್ಮ ಅಕ್ಕ ತಂಗಿ ಇದ್ದರೆ ಇಲ್ಲ ನಿಮ್ಮ ತಾಯಿ ಮಗಳು ಇದ್ದರೆ ಹೇಗೆ ಮಾಡುವಿರಿ, ಇಂದು ಬೇರೆ ಮನೆ ಮಗಳ ನೀನು ಅನ್ಯಾಯ ಮಾಡಿದರೆ ಮುಂದೆ ಒಂದು ದಿನ ಖಂಡಿತ ನಿಮ್ಮ ಮನೆ ಮಗಳಿಗೂ ತಪ್ಪಿದ್ದಲ್ಲ.
ಬಾಲ್ಯ ವಿವಾಹ ಬಾಲಕಾರ್ಮಿಕತೆ,ಅತ್ಯಾಚಾರ ದೌರ್ಜನ್ಯ ಮತ್ತು ಹೆಣ್ಣು ಮಕ್ಕಳು ಮಹಿಳೆಯರ ಕಳ್ಳ ಸಾಗಣಿಕೆ ಇದು ಒಂದು ಹೆಣ್ಣು ಮಕ್ಕಳಿಗೆ ದೊಡ್ಡ ಪಿಡುಗು ಎಂದರೆ ತಪ್ಪಾಗಲಾರದು. ಇವುಗಳಿಗೆ ಒಳಗಾಗಿ ಇಲ್ಲಿ ಸಾಯುವುದು ಹೆಣ್ಣುಮಕ್ಕಳು ಎಂಬುದು ಮರಿಬೇಡಿ. ಹೆಣ್ಣು ಮಕ್ಕಳ ಭವಿಷ್ಯ ರೂಪಿಸಿ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಿರಿ ಹೆಣ್ಣು ಮಕ್ಕಳನ್ನ ದೇವರ ಸ್ವರೂಪವೆಂದು ನೋಡಿರಿ ದಯವಿಟ್ಟು ಹೆಣ್ಣು ಎಂದರೆ ಎಲ್ಲವನ್ನು ಸಹಿಸಿಕೊಂಡು ಹೋಗುವ ಯಂತ್ರವಲ್ಲ ಹೆಣ್ಣು ಮಕ್ಕಳಿಗೂ ನೆಮ್ಮದಿಯಿಂದ ಬದುಕಲು ಬಿಡಿ ಎಲ್ಲಾ ಹೆಣ್ಣು ಮಕ್ಕಳನ್ನು ನಿಮ್ಮ ಮನೆಮಗಳು ಎಂದು ಭಾವಿಸಿರಿ ಹೆಣ್ಣಿನ ಶಾಪ ಒಳ್ಳೆಯದಲ್ಲ.
