Sunday, June 28, 2026
Homeರಾಜ್ಯಅಪ್ಪಾಜಿ ನಾಡಗೌಡರಿಗೆ ಸಚಿವ ಸ್ಥಾನ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ: ಸಿಎಂ ಡಿ.ಕೆ. ಶಿವಕುಮಾರ್...!!!

ಅಪ್ಪಾಜಿ ನಾಡಗೌಡರಿಗೆ ಸಚಿವ ಸ್ಥಾನ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ: ಸಿಎಂ ಡಿ.ಕೆ. ಶಿವಕುಮಾರ್…!!!

ಬೆಂಗಳೂರು 26:

“ಅಪ್ಪಾಜಿ ಸಿ.ಎಸ್. ನಾಡಗೌಡ ಅವರ ಬಗ್ಗೆ ನನಗೆ ಯಾರೂ ತಿಳಿಹೇಳುವ ಅಗತ್ಯವಿಲ್ಲ. ಬಂಗಾರಪ್ಪ ಅವರ ಸರ್ಕಾರದ ಅವಧಿಯಲ್ಲಿ ನಾವು ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರ ರಾಜಕೀಯ ಜೀವನ, ಪಕ್ಷದ ಮೇಲಿನ ನಿಷ್ಠೆ ಮತ್ತು ಸಂಘಟನಾ ಸಾಮರ್ಥ್ಯದ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಜಿಲ್ಲಾ ಪಂಚಾಯತ್ ಚುನಾವಣೆಗಳಿಂದಲೇ ಪಕ್ಷದ ನಿಷ್ಠೆಯನ್ನು ಕಾಪಾಡಿಕೊಂಡು ಬಂದಿರುವ ನಾಯಕ ಅಪ್ಪಾಜಿ ನಾಡಗೌಡ. ಪಕ್ಷಕ್ಕಾಗಿ ಅವರು ಸಲ್ಲಿಸಿರುವ ಸೇವೆ ಗಮನಾರ್ಹವಾಗಿದೆ. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟಕ್ಕೆ ಅವರ ಹೆಸರು ಪಟ್ಟಿಯಲ್ಲಿತ್ತು. ಆದರೆ ನಂತರ ಅಂತಿಮ ಹಂತದಲ್ಲಿ ಅವರ ಹೆಸರು ಕೈಬಿಡಲಾಯಿತು. ಅದು ಅವರಿಗೆ ಆಗಿರುವ ಅನ್ಯಾಯ ಎಂಬ ಭಾವನೆ ಹಲವರಲ್ಲಿದೆ. ರಾಜಕಾರಣ ಎಂಬುದು ಕೃಷಿಯಂತೆಯೇ. ಇಲ್ಲಿ ಒಬ್ಬ ವ್ಯಕ್ತಿಯಿಂದ ಮಾತ್ರ ಎಲ್ಲ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಎಲ್ಲರ ಸಹಕಾರವೂ ಅಗತ್ಯ. ನಾಡಗೌಡರ ಬಗ್ಗೆ ನನಗೆ ಗೊತ್ತಿದೆ, ನನ್ನ ಬಗ್ಗೆ ನಾಡಗೌಡರಿಗೂ ಗೊತ್ತಿದೆ. ಅವರಿಗೆ ಸಚಿವ ಸ್ಥಾನ ದೊರಕಿಸುವ ವಿಚಾರವಾಗಿ ನಾನು ಪಕ್ಷದ ಹೈಕಮಾಂಡ್‌ ಮುಂದೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಹೆಚ್ಚಿನ ಸುದ್ದಿ