
ಮುದ್ದೇಬಿಹಾಳ: ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಆರ್‌ಎಸ್‌ಎಸ್ ಸಂಘ ಪರಿವಾರದ ಸಹಯೋಗದಲ್ಲಿ ಆ.14ರಂದು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ರಾತ್ರಿ 11.45ಕ್ಕೆ ಪರಮ ಪೂಜ್ಯ ಭಗವಾ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ವಂದೇ ಮಾತರಂ ಗಾಯನ ನಡೆಯಲಿದ್ದು, ಮಧ್ಯರಾತ್ರಿ 12 ಗಂಟೆಗೆ ಪವಿತ್ರ ತಿರಂಗಾ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಸಂಘದ ಸದಸ್ಯ ಪುನೀತ ಹಿಪ್ಪರಗಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಪ್ರಚಾರಕರಾದ ದಾಮೋದರ್ ಜಿ. ಉಪಸ್ಥಿತರಿರಲಿದ್ದಾರೆ. ದೇಶಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ರಾತ್ರಿ 10.30ರೊಳಗೆ ಎಲ್ಲರೂ ಬಸವೇಶ್ವರ ವೃತ್ತಕ್ಕೆ ಆಗಮಿಸಬೇಕು ಎಂದು ಪುನೀತ ಹಿಪ್ಪರಗಿ ಮನವಿ ಮಾಡಿದ್ದಾರೆ.

