Thursday, June 25, 2026
Homeಕ್ರೀಡೆರಾಜ್ಯಕ್ಕೆ ತೃತೀಯ ಸ್ಥಾನ ತಂದ ಮುದ್ದೇಬಿಹಾಳದ ಏಕಲವ್ಯ ರೋಲರ್ಸ ಸ್ಕೇಟಿಂಗ್‌ ಅಕಾಡೆಮಿ ವಿದ್ಯಾರ್ಥಿಗಳು...!

ರಾಜ್ಯಕ್ಕೆ ತೃತೀಯ ಸ್ಥಾನ ತಂದ ಮುದ್ದೇಬಿಹಾಳದ ಏಕಲವ್ಯ ರೋಲರ್ಸ ಸ್ಕೇಟಿಂಗ್‌ ಅಕಾಡೆಮಿ ವಿದ್ಯಾರ್ಥಿಗಳು…!

ಮುದ್ದೇಬಿಹಾಳ:
ಮಹಾರಾಷ್ಟ್ರದ ರಾಜ್ಯದ ಸೋಲಾಪೂರನಲ್ಲಿ ರೊಲರ್ಸ್
ಸ್ಕೇಟಿಂಗ್ ಸ್ಪೋಟ್ಸ್ ಫೇಡರೇಷನ್ ಆಫ್ ಇಂಡಿಯಾವತಿಯಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್ ಸ್ಕೇಟಿಂಗ್ ಮೈದಾನದಲ್ಲಿ ನಡೆದ 8ನೇ ರಾಷ್ಟçಮಟ್ಟದ ಪಂದ್ಯಾವಳಿಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಏಕಲವ್ಯ ರೊಲರ್ಸ್ ಸ್ಕೇಟಿಂಗ್ ಅಕಾಡೆಮಿಯ ಕ್ರೀಡಾಪಟುಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಗಳನ್ನು ಹಾಗೂ ಅತೀ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ತೃತೀಯ ಸ್ಥಾನ ಪಡೆಯುವ ಮೂಲಕ ಸಾಧನೆಗೈದಿದ್ದಾರೆ.


ಈ ಕುರಿತು ಮಾಹಿತಿ ನೀಡಿರುವ ಏಕಲವ್ಯ ರೊಲರ್ಸ್ ಸ್ಕೇಟಿಂಗ್ ಅಕಾಡೆಮಿಯ ಸಂಸ್ಥಾಪಕ ಶಿವಕುಮಾರ ಶಾರದಳ್ಳಿ, ನಮ್ಮ ತಾಲೂಕಿನಿಂದ ಒಟ್ಟೂ 12 ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು ಎಲ್ಲ ವಿದ್ಯಾರ್ಥಿಗಳೂ ವಯಕ್ತಿವಾಗಿ ಹಾಗೂ ರಾಜ್ಯದಿಂದ ಅತೀ ಹೆಚ್ಚು ಅಂಕಗಳನ್ನು ಪಡೆದು ಪಂದ್ಯಾವಳಿಯಲ್ಲಿ ಪಂದ್ಯಶ್ರೇಷ್ಠವಾಗಿ ತೃತೀಯ ಸ್ಥಾನದ ಟ್ರೋಪಿ ಪಡೆದುಕೊಂಡು ನಮ್ಮ ತಾಲೂಕಿನ ಹಿರಿಮೆ ಹೆಚ್ಚಿಸಿದ್ದಾರೆ.
ರೊಲರ್ಸ್ ಸ್ಕೇಟಿಂಗ್ ಸ್ಪೋಟ್ಸ್ ಫೇಡರೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ರಮೇಶ ಸಿಂಗ್, ಪ್ರ.ಕಾರ್ಯದರ್ಶಿ ಸಂಜಯ ಕಾಂಬಳೆ ಹಾಗೂ ಮಹಾರಾಷ್ಟ್ರದ ರಾಜ್ಯಾಧ್ಯಕ್ಷ ರಾಜಥನ್ ರಾಕ್, ಪ್ರ.ಕಾರ್ಯದರ್ಶಿ ಅಭಿಜೀತ ರಾಕ್ ಮತ್ತು ಉಪ ಕಾರ್ಯದರ್ಶಿ ಖೇದರ್ ಬದಾಮಿಕರ್ ವಿಜೇತರಿಗೆ ಮಕ್ಕಳಿಗೆ ಪದಕಗಳನ್ನು ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನದ ಟ್ರೋಪಿಯನ್ನು ನೀಡಿ ಅಭಿನಂದಿಸಿದರು.


ವಿಜೇತ ವಿದ್ಯಾರ್ಥಿಗಳು:
ಪ್ರೋಫೇಷನ್ ಇನ್‌ಲೈನ್ ಸ್ಕೇಟಿಂಗ್: 10 ವರ್ಷದೊಳಗಿನ ಕ್ರೀಡಾಪಟುಗಳ 300ಮೀ ಮತ್ತು 500ಮೀ ಸ್ಪರ್ಧೆಯಲ್ಲಿ ವಿಕ್ರಾಂತ ಶಾರದಳ್ಳಿ ಚಿನ್ನದ ಪದಕ, ವೈಭವ ಬಿರಾದಾರ ಬೆಳ್ಳಿ, 12 ಷರ್ವದೋಳಗಿನವರಲ್ಲಿ ಅಕೀಲ ಅಸ್ಕಿ ಕಂಚು ಪದಕವನ್ನು ಪಡೆದಿದ್ದಾರೆ. 15 ವರ್ಷದೊಳಗಿನವರಲ್ಲಿ ಶಂಕುಂತಲಾ ಶಾರದಳ್ಳಿ 500ಮೀ ಮತ್ತು 1000ಮೀ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ.
ಕ್ವಾರ್ಡ ಸ್ಕೇಟಿಂಗ್: 15 ವರ್ಷದೋಳಗಿನ ಕ್ರೀಡಾಪಟುಗಳಲ್ಲಿ ಹೃದಯಾನಂದ ಕೊಪ್ಪ 500ಮೀ ಬೆಳ್ಳಿ ಪದಕ ಪಡೆದರೆ ಮತ್ತು 1000ಮೀ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾನೆ.
ರಿಕ್ಲೇಷನ್ ಇನ್‌ಲೈನ್ ಸ್ಕೇಟಿಂಗ್: 10 ವರ್ಷದೊಳಗಿನ ಕ್ರೀಡಾಪಟುಗಳಲ್ಲಿ ಯುಸುಫ್ ಚಿಮ್ಮಲಗಿ 500ಮೀ.ನಲ್ಲಿ ಕಂಚು, ಶಾಹೀದಾ ಅಕ್ಕಲಕೋಟ 300ಮೀ. ಮತ್ತು 500ಮೀ.ನಲ್ಲಿ ಚಿನ್ನದ ಪದಕ, 12 ವರ್ಷದೊಳಗಿನ ಕ್ರೀಡಾಪಟುಗಳಲ್ಲಿ ಮಹ್ಮದಾಹೀಲ್ ಅಕ್ಕಲಕೋಟ 300ಮೀ. ಮತ್ತು 500ಮೀ.ನಲ್ಲಿ ಚಿನ್ನ, ನಾಗಶೃತನ ಇಲ್ಲೂರ 300ಮೀ. ಮತ್ತು 500ಮೀ.ನಲ್ಲಿ ಬೆಳ್ಳಿ, ಅಭಯ ದೇವಾಡಗಿ 300ಮೀ.ನಲ್ಲಿ ಕಂಚಿನ ಪದಕ ಪಡೆದಿದ್ದಾನೆ.
ಪಾಲಕರಾದ ನಂದು ಅಸ್ಕಿ, ರಾಚೋಟಿ ಬಳಿಗಾರ, ಮಹ್ಮದಶಫೀಕ್ ಅಕ್ಕಲಕೋಟ, ಉಮಾಕಾಂತ ರುದ್ರವಾರ, ಮೊಸೀನ್ ಚಿಮ್ಮಲಗಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿದರು.

ಹೆಚ್ಚಿನ ಸುದ್ದಿ