Saturday, May 2, 2026
Homeರಾಜ್ಯಅತೀ ಕಡಿಮೆ ಅವಧಿಯಲ್ಲಿಯೇ ಮುದ್ದೇಬಿಹಾಳ ಬಿಎಎಸ್ ಸಂಸ್ಥೆಗೆ ಕೇಂದ್ರದಿಂದ ದೊರಕಿದ ಸಿಬಿಎಸ್ಇ ಪರವಾಣಿಗೆ…!ರಾಜ್ಯದ ನಿರುದ್ಯೋಗಿ ಯುವಕರಿಗೆ...

ಅತೀ ಕಡಿಮೆ ಅವಧಿಯಲ್ಲಿಯೇ ಮುದ್ದೇಬಿಹಾಳ ಬಿಎಎಸ್ ಸಂಸ್ಥೆಗೆ ಕೇಂದ್ರದಿಂದ ದೊರಕಿದ ಸಿಬಿಎಸ್ಇ ಪರವಾಣಿಗೆ…!ರಾಜ್ಯದ ನಿರುದ್ಯೋಗಿ ಯುವಕರಿಗೆ 2500ಕ್ಕೂ ಹೆಚ್ಚು ಉದ್ಯೋಗ ಮೇಳ ಹಮ್ಮಿಕೊಂಡ ಬಿಎಎಸ್ ಶಿಕ್ಷಣ ಸಂಸ್ಥೆ

ಮುದ್ದೇಬಿಹಾಳ:

ಗ್ರಾಮೀಣ ಪ್ರತಿಭೆಗಳಿಗೆ ನಮ್ಮ ಸಂಸ್ಥೆಗೆ ಸಿಬಿಎಸ್‌ಸಿಯಿಂದ ಪರವಾಣಿಗೆ ದೊರಕಿದ್ದು ಸಂತಸ ತಂದಿದೆ. ಇದರಿಂದ ಗ್ರಾಮೀಣ ಅಭ್ಯರ್ಥಿಗಳ ಕಲಿಕೆಗೆ ಇನ್ನೂ ಹೆಚ್ಚಿನ ಶಕ್ತಿ ದೊರಕಿದಂತಾಗುತ್ತದೆ ಎಂದು ಬಿಎಎಸ್ ಇಂಟರ್‌ನ್ಯಾಷನಲ್ ಸ್ಕೂಲ್ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಹೇಳಿದರು.

ತಾಲೂಕಿನ ಹಡಲಗೇರಿ ವ್ಯಾಪ್ತಿಯ ಬಿಎಎಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಮುಖ್ಯವಾಗಿ ನಮ್ಮ ಸಂಸ್ಥೆಯನ್ನು ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದೊಂದಿಗೆ ನಿಡುವುದರಲ್ಲಿ ನಮ್ಮ ಸಂಸ್ಥೆ ಯಶಸ್ವಿಯಾಗಿದೆ ಎಂದು ಹೇಳಿದರು.ಶೈಕ್ಷಣಿಕ ಸಂಯೋಜಕ ಸತೀಶ ವಾಲಿಕಾರ ಮಾತನಾಡಿ, ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ಸಮಯದಲ್ಲಿ ಸಿಬಿಎಸ್‌ಸಿಯಿಂದ ಪವರಾಣಿಗೆ ದೊರಕಿದ್ದು ಇದರಿಂದ ಮಕ್ಕಳು ಶೈಕ್ಷಣಿಕವಾಗಿ ಸರ್ವೊತಮ ಬೆಳವಣಿಗೆಯಿಂದ ಬೆಳೆಯುತ್ತಾರೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಮೇ.3 ರಂದು ಬಿಎಎಸ್ ಸಂಸ್ಥೆಯಿಂದ ಬೃಹತ್ ಉದ್ಯೋಗ ಮೇಳ:

ಮುದ್ದೇಬಿಹಾಳ ತಾಲೂಕಿನ ಬಿಎಎಸ್ ಶಿಕ್ಷಣ ಸಂಸ್ಥೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ಮಾತ್ರವಲ್ಲದೇ ಪ್ರತಿಭಾವಂತ ನಿರೂದ್ಯೋಗಿ ಯುವಕರಿಗೆ ಅವರ ಪ್ರತಿಭೆ ತಕ್ಕವಾಗಿ ಉದ್ಯೋಗವನ್ನು ನೀಡುವಲ್ಲಿಯೂ ಸಂಕಲ್ಪವನ್ನು ಮಾಡಿದ್ದು ಬರುವ ಮೇ.3 ರಂದು ನಮ್ಮ ಸಂಸ್ಥೆಯಲ್ಲಿ ಸುಮಾರು 2500 ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡಲು ಉದ್ಯೋಗ ಮೇಳವನ್ನು ಹಮ್ಮಿಕೋಳ್ಳಲಾಗಿದೆ ಎಂದು ಸಂಸ್ಥೆ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಹೇಳಿದರು.ಮೇ ತಿಂಗಳಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ,ಪಿಯುಸಿ,ಡಿಪ್ಲೋಮಾ ಅಥವಾ ಯಾವುದೇ ಪದವಿ ಉತ್ತೀರ್ಣವಾದರೂ ಇಲ್ಲವಾದರೂ ಅಂತಹ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ನಮ್ಮ ಸಂಸ್ಥೆಯು ಈಗಾಗಲೇ ನೂರಾರು ಉನ್ನತ ಎಂಎನ್‌ಸಿ ಪಂಕನಿಗಳೊAದಿಗೆ ಒಡನಾಟವಿದ್ದು ರಾಜ್ಯದ ದಕ್ಷಿಣ ಭಾಗದ ಬೆಂಗಳೂರು, ಕೋಲಾರ, ದೊಡ್ಡಬಳ್ಳಾಪೂರು, ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿರುವ ವಿವಿಧ ಖಾಸಗಿ ಕಂಪನಿಗಳಲ್ಲಿ ಇರುವ ಉದ್ಯೋಗವನ್ನು ಉತ್ತರ ಕರ್ನಾಟಕ ಭಾಗದ ನಿರುದ್ಯೋಗಿ ಯುವಕರಿಗೆ ದೊರಕಿಸಿಕೊಡುವ ಸಂಕಲ್ಪವನ್ನು ಹೊಂದಿಗೆ. ಇದಕ್ಕಾಗಿ ನಮ್ಮ ಸಂಸ್ಥೆಯಲ್ಲಿ ಮೇ.3 ರಂದು ಬೆಳಿಗ್ಗೆ 9 ಗಂಟೆಯಿAದ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಎಲ್ಲಾ ನಿರುದ್ಯೋಗ ಯುವಕರು ತಮ್ಮ ಎಲ್ಲಾ ಮೂಲ ದಾಖಲೆಗಳೊಂದಿಗೆ ಆಗಮಿಸಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಸಂಸ್ಥೆ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಹೇಳಿದರು.ಸ್ಥಳದಲ್ಲಿಯೇ ಉದ್ಯೋಗದ ಪ್ರಮಾಣಪತ್ರ:ಉದ್ಯೋಗ ಮೇಳದಲ್ಲಿ ಭಾಗವಹಿಸುವ ಎಲ್ಲಾ ನಿರುದ್ಯೋಗಿ ಯುವಕರಿಗೆ ಆಯಾ ಕಂಪನಿಗಳ ತೆಗೆದುಕೊಳ್ಳುವ ಸಂದರ್ಶನ ಮೂಲಕ ಅವರ ಕೆಲಸದ ಪ್ರಮಾಣ ಪತ್ರವನ್ನು ಸ್ಥಳದಲ್ಲಿಯೇ ನೀಡಲಾಗುತ್ತದೆ. ನಂತರ ಆಯಾ ಕಂಪನಿಗಳ ನಿಯಮದಂತೆ ಯುವಕರು ಕಂಪನಿಯ ಮೂಲ ಸ್ಥಾನಗಳಲ್ಲಿ ಉದ್ಯೋಗವನ್ನು ಮಾಡಬಹುದಾಗಿದೆ.

ಊಟ ವಸತಿಗೂ ಅನುಕೂಲ ಮಾಡಿರುವ ಬಿಎಎಸ್ ಸಂಸ್ಥೆ:

ಉದ್ಯೋಗ ಮೇಳದಲ್ಲಿ ಸೇರುವ ಬಹುತೇಕ ಸುತ್ತಮುತ್ತಲಿನ ಜಿಲ್ಲೆಗಳ ಯುವಕ ಯುವತಿಯರಿಗೆ ಬಿಎಎಸ್ ಸಂಸ್ಥೆಯಿAದ ಉಚಿತವಾಗಿ ಊಟ ಮತ್ತು ವಸತಿಯನ್ನು ಕಲ್ಪಿಸಲಾಗುತ್ತದೆ. ಇದರ ಸದುಪಯೋಗವನ್ನು ಯುವಕ ಯುವತಿಯರು ಪಡೆದುಕೊಳ್ಳಬೇಕು ಎಂದು ಸಂಸ್ಥೆ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9108445003, 9187229281, 9108445005, 9353158101 ದೂರವಾಣಿಗಳಿಗೆ ಸಂಪರ್ಕಿಸಬಹುದಾಗಿದೆ.

“ಅತೀ ಕಡಿಮೆ ಅವಧಿಯಲ್ಲಿಯೆ ನಮ್ಮ ಸಂಸ್ಥೆಗೆ ಕೇಂದ್ರದಿoದ ಸಿಬಿಎಸ್‌ಸಿ ಪರವಾಣಿಗೆ ದೊರಕಿದ್ದು ನಮ್ಮ ಸಂಸ್ಥೆಯಿoದ ವಿದ್ಯಾರ್ಥಿಗಳಿಗೆ ನೀಡಲಾದ ಸೌಲಭ್ಯ ಮತ್ತು ಸ್ಥಳೀಯ ಪಾಲಕರ ಉತ್ಸಾದಿಂದಾಗಿದೆ. ಇದರಿಂದ ನಮ್ಮ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.”

-ಸುಮಂಗಳಾ ಬಿರಾದಾರ, ಕಾರ್ಯದರ್ಶಿಗಳು, ಬಿಎಎಸ್ ಸಂಸ್ಥೆ,

ಹೆಚ್ಚಿನ ಸುದ್ದಿ